alex Certify 100 ರೂ. ಹೂಡಿಕೆಯೊಂದಿಗೆ ಭರ್ಜರಿ ಲಾಭ: ಅಂಚೆ ಇಲಾಖೆ ಮತ್ತೊಂದು ಸುರಕ್ಷಿತ ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

100 ರೂ. ಹೂಡಿಕೆಯೊಂದಿಗೆ ಭರ್ಜರಿ ಲಾಭ: ಅಂಚೆ ಇಲಾಖೆ ಮತ್ತೊಂದು ಸುರಕ್ಷಿತ ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಪೋಸ್ಟ್ ಆಫೀಸ್ ಯೋಜನೆಗಳು ಯಾವಾಗಲೂ ಅತ್ಯುತ್ತಮ ಮತ್ತು ಸುರಕ್ಷಿತ ಹೂಡಿಕೆ ವಿಧಾನಗಳಲ್ಲಿ ಒಂದಾಗಿದೆ.

ಅವುಗಳಲ್ಲಿ ಒಂದು ಮರುಕಳಿಸುವ ಠೇವಣಿ ಯೋಜನೆ. ಆರ್‌.ಡಿ. ಯೋಜನೆಯಲ್ಲಿ, ನೀವು ತಿಂಗಳಿಗೆ ಕೇವಲ 100 ರೂ.ಗಳೊಂದಿಗೆ ಹೂಡಿಕೆ ಮಾಡಲು ಪ್ರಾರಂಭಿಸಬಹುದು. 10 ರ ಗುಣಕಗಳಲ್ಲಿಯೂ ಹೂಡಿಕೆ ಮಾಡಬಹುದು. ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಶೇ .5.8 ವಾರ್ಷಿಕ ಬಡ್ಡಿದರದ ಲಾಭವನ್ನು ಜನರಿಗೆ ನೀಡಲಾಗುತ್ತಿದೆ.

ಪೋಸ್ಟ್ ಆಫೀಸ್ ಆರ್.ಡಿ. ಠೇವಣಿ ಯೋಜನೆ ಎಂದರೇನು?

ಇದು ಸರ್ಕಾರಿ ಖಾತರಿ ಯೋಜನೆಯಾಗಿದ್ದು, ಉತ್ತಮ ಬಡ್ಡಿಯೊಂದಿಗೆ ಸಣ್ಣ ಮೊತ್ತವನ್ನು ಜಮಾ ಮಾಡಬಹುದು. ಮರುಕಳಿಸುವ ಠೇವಣಿ ಯೋಜನೆಯಡಿ, ಪ್ರತಿ ತಿಂಗಳು 100 ರೂ.ಗಳೊಂದಿಗೆ ಹೂಡಿಕೆ ಮಾಡಲು ಪ್ರಾರಂಭಿಸಬಹುದು, ಆದರೆ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ.

ಠೇವಣಿ ಮೊತ್ತದ ಟೈಮ್‌ಲೈನ್:

ಒಬ್ಬ ವ್ಯಕ್ತಿಯು ತಿಂಗಳ 1 ನೇ ಮತ್ತು 15 ನೇ ತಾರೀಖಿನ ನಡುವೆ ಖಾತೆಯನ್ನು ತೆರೆದರೆ, ಆ ತಿಂಗಳ 15 ನೇ ತಾರೀಖಿನ ಮೊದಲು ಅವರು ತಮ್ಮ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಬೇಕು. ಆದರೆ, 15 ನೇ ತಾರೀಖಿನ  ನಂತರ ಖಾತೆಯನ್ನು ತೆರೆದರೆ ಅವರು ತಿಂಗಳ ಕೊನೆಯ ದಿನದೊಳಗೆ ಹಣವನ್ನು ಠೇವಣಿ ಮಾಡಬೇಕು.

ನೀವು ಹಣವನ್ನು ಠೇವಣಿ ಮಾಡಲು ನಿಮ್ಮ ದಿನಾಂಕ ಮರೆತರೆ ಪ್ರತಿ 100 ರೂ.ಗೆ ಪ್ರತಿ ತಿಂಗಳು 1 ರೂ. ಡೀಫಾಲ್ಟ್ ಶುಲ್ಕ ಅನ್ವಯಿಸಲಾಗುತ್ತದೆ. ನೀವು ಸತತ ನಾಲ್ಕು ಇನ್‌ ಸ್ಟಾಲೇಶನ್‌ಗಳನ್ನು ಜಮಾ ಮಾಡಲು ವಿಫಲವಾದರೆ, ನಿಮ್ಮ ಖಾತೆಯು ಮುಚ್ಚಲ್ಪಡುತ್ತದೆ. ಮುಂದಿನ ಎರಡು ತಿಂಗಳಲ್ಲಿ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು. ಪೋಸ್ಟ್ ಆಫೀಸ್ ಆರ್.ಡಿ. 5 ವರ್ಷಗಳ ಅವಧಿ ಹೊಂದಿದೆ.

ಯಾರು ಆರ್.ಡಿ. ಠೇವಣಿ ಖಾತೆಯನ್ನು ತೆರೆಯಬಹುದು?

ಮರುಕಳಿಸುವ ಠೇವಣಿ ಖಾತೆಯನ್ನು ಒಬ್ಬ ವಯಸ್ಕ ವ್ಯಕ್ತಿ ತೆರೆಯಬಹುದು ಅಥವಾ ಮೂರು ಜನರು ಜಂಟಿ ರೂಪದಲ್ಲಿ ಖಾತೆಯನ್ನು ತೆರೆಯಬಹುದು. ಖಾತೆಯನ್ನು ತೆರೆಯಲು ಅಪ್ರಾಪ್ತ ವಯಸ್ಕರಿಗೆ ಪೋಷಕರ ಹೆಸರು ಅಗತ್ಯವಿರುತ್ತದೆ. ಆದರೆ, 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ಸಹ ಈ ಖಾತೆಯನ್ನು ತೆರೆಯಬಹುದು.

ಸಾಲದ ಲಾಭವನ್ನು ಪಡೆದುಕೊಳ್ಳಿ:

ನೀವು ಈ ಯೋಜನೆಯಡಿ ನಿಮ್ಮ 12 ಇನ್ ಸ್ಟಾಲ್ ಮೆಂಟ್ ಗಳನ್ನು ಠೇವಣಿ ಮಾಡಿದ್ದರೆ ಮಾತ್ರ ನೀವು ಪೋಸ್ಟ್ ಆಫೀಸ್ ಆರ್.ಡಿ. ಯೋಜನೆಯ ಮೂಲಕ ಸಾಲ ಸೌಲಭ್ಯದ ಲಾಭವನ್ನು ಪಡೆಯಬಹುದು. ಇದರ ಅಡಿಯಲ್ಲಿ, ನಿಮ್ಮ ಖಾತೆಯಲ್ಲಿ ಠೇವಣಿ ಇಟ್ಟಿರುವ ಮೊತ್ತದ ಶೇಕಡ 50 ರ ವರೆಗೆ ನೀವು ಸಾಲವನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...