ಅಂಚೆ ಕಚೇರಿ, ಗ್ರಾಹಕರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ನೀಡುತ್ತದೆ. ಪ್ರತಿ ತಿಂಗಳು ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಯ ಮೂಲಕ ನೀವು ಗಳಿಸಬಹುದು. ಅಂಚೆ ಕಚೇರಿಯ ಯೋಜನೆಗಳು ಸುರಕ್ಷಿತವಾಗಿದ್ದು, ಎಂಐಎಸ್ ಯೋಜನೆ ಮೂಲಕ ನೀವು ಹಣ ಉಳಿತಾಯ ಮಾಡಬಹುದು.
ವೈಯಕ್ತಿಕ ಖಾತೆ ತೆರೆಯುವಾಗ ಎಂಐಎಸ್ ಯೋಜನೆಯಲ್ಲಿ ಕನಿಷ್ಠ 1,000 ರೂಪಾಯಿ ಮತ್ತು ಗರಿಷ್ಠ 4.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿವರೆಗೆ ಠೇವಣಿ ಇಡಬಹುದು. ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರಿಗೆ ಈ ಯೋಜನೆ ತುಂಬಾ ಪ್ರಯೋಜನಕಾರಿಯಾಗಿದೆ.
ಎಂಐಎಸ್ ಲಾಭವೆಂದ್ರೆ ಮೂರು ಜನರು ಜಂಟಿ ಖಾತೆಯನ್ನು ತೆರೆಯಬಹುದು. ಜಂಟಿ ಖಾತೆಗಳನ್ನು ಯಾವುದೇ ಸಮಯದಲ್ಲಿ ಒಂದೇ ಖಾತೆಗೆ ಪರಿವರ್ತಿಸಬಹುದು. ಏಕ ಖಾತೆಯನ್ನು ಜಂಟಿ ಖಾತೆಯಾಗಿ ಪರಿವರ್ತಿಸಬಹುದು. ಖಾತೆಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲು, ಎಲ್ಲಾ ಖಾತೆ ಸದಸ್ಯರು ಜಂಟಿ ಅರ್ಜಿಯನ್ನು ನೀಡಬೇಕಾಗುತ್ತದೆ.
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆಯಬೇಕಾಗುತ್ತದೆ. ಇದರ ನಂತರ ಹತ್ತಿರದ ಅಂಚೆ ಕಚೇರಿ ಶಾಖೆಗೆ ಹೋಗಿ ಉಳಿತಾಯ ಖಾತೆಯನ್ನು ಎಂಐಎಸ್ ಆಗಿ ಪರಿವರ್ತಿಸಬೇಕು. ಇದಕ್ಕೆ ಐಡಿ ಪ್ರೂಫ್, ರೆಸಿಡೆನ್ಶಿಯಲ್ ಪ್ರೂಫ್ ಮತ್ತು 2 ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ನೀಡಬೇಕು. ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ನಾಮಿನಿಯೊಂದಿಗೆ ಅಂಚೆ ಕಚೇರಿಗೆ ಸಲ್ಲಿಸಬೇಕು. ನಂತ್ರ ಹಣ ಪಾವತಿಸಬೇಕು.
ಒಂದು ವರ್ಷದ ನಂತರ ಹಣವನ್ನು ಹಿಂಪಡೆಯಬಹುದು. ಮೂರು ವರ್ಷಗಳ ಮೊದಲು ಹಣ ಹಿಂಪಡೆದ್ರೆ ಶೇಕಡಾ 2 ರಷ್ಟು ಮೊತ್ತ ಕಡಿತಗೊಳ್ಳುತ್ತದೆ. 3 ವರ್ಷಗಳ ನಂತರ ಹಣ ವಾಪಸ್ ಪಡೆದ್ರೆ ಒಟ್ಟು ಮೊತ್ತದಲ್ಲಿ ಶೇಕಡಾ 1 ರಷ್ಟು ಕಡಿತಗೊಳ್ಳುತ್ತದೆ. 5 ವರ್ಷಗಳ ನಂತರ ಮೊತ್ತದಲ್ಲಿ ಯಾವುದೇ ಕಡಿತವಿರುವುದಿಲ್ಲ. ಸಂಪೂರ್ಣ ಹಣವನ್ನು ವಾಪಸ್ ಪಡೆಯಬಹುದು.