ಅಂಚೆ ಕಚೇರಿಗಳು ಡಿಜಿಟಲ್ ಇಂಡಿಯಾ ಅಡಿಯಲ್ಲಿ ನಿರಂತರ ನವೀಕರಣಗೊಳ್ಳುತ್ತಿವೆ. ಈಗ ಭಾರತೀಯ ಅಂಚೆ ಕಚೇರಿ ಪೇಮೆಂಟ್ ಬ್ಯಾಂಕ್ ಮೊಬೈಲ್ ಅಪ್ಲಿಕೇಷನ್ ಪ್ರಾರಂಭಿಸಿದೆ. ಹೂಡಿಕೆದಾರರು ಅಂಚೆ ಕಚೇರಿಗೆ ಹೋಗಿ ಹೂಡಿಕೆ ಮಾಡಬೇಕಾಗಿಲ್ಲ. ಮನೆಯಲ್ಲೇ ಕುಳಿತು ಅಪ್ಲಿಕೇಷನ್ ಮೂಲಕ ಹೂಡಿಕೆ ಮಾಡಬಹುದು. ಅಂಚೆ ಕಚೇರಿ ಮೂಲಕ ಗಳಿಕೆ ಮಾಡಲು ಬಯಸಿದ್ದರೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಡಿ ಹೂಡಿಕೆ ಮಾಡಿ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಉತ್ತಮ ಆದಾಯ ನೀಡುತ್ತದೆ. ಹೂಡಿಕೆದಾರರು ಈ ಯೋಜನೆಯಲ್ಲಿ ಜಂಟಿ ಖಾತೆಯನ್ನು ತೆರೆದು ಅದರಲ್ಲಿ 9 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಪ್ರತಿ ತಿಂಗಳು 4950 ರೂಪಾಯಿಗಳನ್ನು ಇದ್ರಿಂದ ಗಳಿಸಬಹುದು. ಈ ಯೋಜನೆಯ ವಾರ್ಷಿಕ ಬಡ್ಡಿ ಶೇಕಡಾ 6.6. ಪ್ರತಿ ತಿಂಗಳು ನಿಮಗೆ 4950 ರೂಪಾಯಿ ಸಿಗುತ್ತದೆ. ಅಂದ್ರೆ ವಾರ್ಷಿಕ 59,400 ರೂಪಾಯಿ ಸಿಗುತ್ತದೆ. ತಿಂಗಳು ಸಿಗುವ 4950 ರೂಪಾಯಿಯನ್ನು ನೀವು ಪಡೆಯಬಹುದು. ಆದ್ರೆ ಹೂಡಿಕೆ ಮಾಡಿದ ಹಣವನ್ನು ಮೆಚುರಿಟಿಗೆ ಬರುವವರೆಗೆ ತೆಗೆಯುವಂತಿಲ್ಲ.
ನೀವು 1000 ರೂಪಾಯಿಯಲ್ಲೂ ಹೂಡಿಕೆ ಮಾಡಬಹುದು. ಒಬ್ಬರೇ ಖಾತೆ ತೆರೆಯುವವರಿದ್ದರೆ 4.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲೂ ಖಾತೆ ತೆರೆಯಬಹುದು. ಒಂದು ಬಾರಿ ಇಬ್ಬರ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದು.
ಮೊದಲು ಐಪಿಪಿಬಿ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು. ಐಪಿಪಿಬಿ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ತೆರೆದ ನಂತ್ರ ಓಪನ್ ಅಕೌಂಟ್ ಕ್ಲಿಕ್ ಮಾಡಿ. ನಿಮ್ಮ ಪಾನ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ. ನಾಮಿನಿ ಬಗ್ಗೆ ಮಾಹಿತಿ ನೀಡಿ. ಸಂಪೂರ್ಣ ಮಾಹಿತಿಯನ್ನು ಸಲ್ಲಿಸಿದ ನಂತರ ಸಲ್ಲಿಸು ಮೇಲೆ ಕ್ಲಿಕ್ ಮಾಡಿ. ಕಡಿಮೆ ಸಮಯದಲ್ಲಿ ಅಂಚೆ ಕಚೇರಿಯಲ್ಲಿ ನಿಮ್ಮ ಖಾತೆ ತೆರೆಯಬಹುದು. ಡಿಜಿಟಲ್ ಉಳಿತಾಯ ಖಾತೆಯು ಒಂದು ವರ್ಷಕ್ಕೆ ಮಾತ್ರ ಮಾನ್ಯವಾಗಿರುತ್ತದೆ. ನಿಯಮಿತ ಉಳಿತಾಯ ಖಾತೆಯನ್ನು ತೆರೆಯುವ ಒಂದು ವರ್ಷದೊಳಗೆ ಬಯೋಮೆಟ್ರಿಕ್ ಪ್ರಮಾಣೀಕರಣವನ್ನು ಪೂರ್ಣಗೊಳಿಸಬೇಕು.