alex Certify ಅಂಚೆ ಕಚೇರಿ ಗ್ರಾಹಕರಿಗೆ ಮತ್ತೊಂದು ಶಾಕ್: ಹಣದ ವ್ಯವಹಾರಕ್ಕೆ ವಿಧಿಸಲಾಗುತ್ತೆ ಹೆಚ್ಚುವರಿ ಶುಲ್ಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಚೆ ಕಚೇರಿ ಗ್ರಾಹಕರಿಗೆ ಮತ್ತೊಂದು ಶಾಕ್: ಹಣದ ವ್ಯವಹಾರಕ್ಕೆ ವಿಧಿಸಲಾಗುತ್ತೆ ಹೆಚ್ಚುವರಿ ಶುಲ್ಕ..!

ನೀವೇನಾದರೂ ಅಂಚೆ ಕಚೇರಿಯಲ್ಲಿ ಖಾತೆಯನ್ನ ಹೊಂದಿದ್ದರೆ ನಿಮಗೊಂದು ಮಹತ್ವದ ಸೂಚನೆ ಕಾದಿದೆ. ಇಂಡಿಯಾ ಪೋಸ್ಟ್​ ಪೇಮೆಂಟ್​ ಬ್ಯಾಂಕ್​ ಇನ್ಮುಂದೆ ಜಮೆ, AEPS ಹಾಗೂ ಹಣ ವಿತ್​ಡ್ರಾಗೆ ಶುಲ್ಕವನ್ನ ವಿಧಿಸಲು ನಿರ್ಧರಿಸಿದೆ. ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ನಿಮ್ಮದೇನಾದರೂ ಉಳಿತಾಯ ಖಾತೆ ಆಗಿದ್ದರೆ ತಿಂಗಳಲ್ಲಿ ನಾಲ್ಕು ಬಾರಿ ವಿತ್​ ಡ್ರಾ ಮಾಡಿದ್ರೆ ಯಾವುದೇ ಶುಲ್ಕ ವಿಧಿಸಲಾಗೋದಿಲ್ಲ. ಇದಾದ ಬಳಿಕದ ವ್ಯವಹಾರಕ್ಕೆ 25 ರೂಪಾಯಿಗೆ 0.50 ಪ್ರತಿಶತ ಚಾರ್ಜ್ ಬೀಳಲಿದೆ.

ಬೇಸಿಕ್​ ಸೇವಿಂಗ್ಸ್ ಅಕೌಂಟ್ಸ್​ನಲ್ಲಿ ಹಣ ಜಮೆ ಮಾಡಿದ್ರೆ ಯಾವುದೇ ಶುಲ್ಕ ವಿಧಿಸಲಾಗೋದಿಲ್ಲ. ಆದರೆ ಸೇವಿಂಗ್ಸ್ ಹಾಗೂ ಕರೆಂಟ್​ ಅಕೌಂಟ್​ಗಳಿಗೆ 25 ಸಾವಿರ ರೂಪಾಯಿಗಳವರೆಗೆ ಉಚಿತವಾಗಿ ಹಣ ಡ್ರಾ ಮಾಡಬಹುದಾಗಿದೆ. ಈ ಲಿಮಿಟ್​ ದಾಟಿದ ಬಳಿಕ ಪ್ರತಿ ವ್ಯವಹಾರಕ್ಕೆ 25 ರೂಪಾಯಿ ಶುಲ್ಕ ಭರಿಸಬೇಕು. ಇನ್ನು ಇಂತಹ ಖಾತೆಗಳಿಗೆ ಹಣ ಜಮೆ ಮಾಡಲು ಕೂಡ ಲಿಮಿಟ್​ ಇದೆ. ಪ್ರತಿ ತಿಂಗಳು 10 ಸಾವಿರ ರೂಪಾಯಿವರೆಗೆ ಉಚಿತ ಜಮೆ ಮಾಡಬಹುದಾಗಿದೆ. ಇದಾದ ಬಳಿಕ 0.50 ಪ್ರತಿಶತ ಶುಲ್ಕ ಭರಿಸಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...