ನವದೆಹಲಿ: ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳಲ್ಲಿಯೂ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ ನಿಯಮ ಜಾರಿಗೆ ಬರಲಿದೆ. ಅಂಚೆ ಕಚೇರಿ ಉಳಿತಾಯ ಖಾತೆಗಳಲ್ಲಿ 500 ರೂ. ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಿದೆ.
ಡಿಸೆಂಬರ್ 11 ರಿಂದ ನಿಯಮ ಜಾರಿಯಾಗಲಿದೆ. ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ನಿರ್ವಹಣೆ ಶುಲ್ಕ ಭರಿಸಬೇಕಾಗುತ್ತದೆ. ಅಂಚೆ ಕಚೇರಿಯ ಎಸ್.ಬಿ. ಖಾತೆಗಳಲ್ಲಿ ಕನಿಷ್ಠ 500 ರೂಪಾಯಿ ಬ್ಯಾಲೆನ್ಸ್ ಉಳಿಸುವಂತೆ ಗ್ರಾಹಕರಿಗೆ ಸೂಚನೆ ನೀಡಲಾಗಿದೆ.
ಇಲ್ಲದಿದ್ದರೆ ಖಾತೆ ನಿರ್ವಹಣೆ ವೆಚ್ಚವೆಂದು 100 ರೂಪಾಯಿ ಶುಲ್ಕವನ್ನು ಕಡಿತ ಮಾಡಲಾಗುವುದು. ಖಾತೆಯಲ್ಲಿ ಹಣ ಇಲ್ಲದಿದ್ದರೆ ಅಂತಂಹ ಖಾತೆ ತನ್ನಿಂತಾನೆ ಅಂತ್ಯವಾಗುತ್ತದೆ. ಅಂಚೆ ಕಚೇರಿ ಉಳಿತಾಯ ಖಾತೆಗೆ ಶೇಕಡ 4ರಷ್ಟು ಬಡ್ಡಿ ನೀಡುತ್ತಿದ್ದು ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳದವರು ನಿರ್ವಹಣೆ ಶುಲ್ಕ ಭರಿಸಬೇಕಿದೆ ಎಂದು ಹೇಳಲಾಗಿದೆ.