ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಖಾತೆದಾರರ ಹಳೆಯ ಚೆಕ್ ಬುಕ್ ಜೂನ್ 30,2021ರವರೆಗೆ ಮಾನ್ಯವಾಗಲಿದೆ. ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಚೆಕ್ ಬುಕ್ ಸಿಂಧುತ್ವದ ದಿನಾಂಕವನ್ನು ಬ್ಯಾಂಕ್ ವಿಸ್ತರಿಸಿದೆ.
ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನೊಂದಿಗೆ ವಿಲೀನಗೊಂಡಿದೆ. ಈ ಬ್ಯಾಂಕುಗಳ ಚೆಕ್‌ಬುಕ್‌ಗಳು, ಪಾಸ್‌ಬುಕ್‌ಗಳು, ಐಎಫ್‌ಎಸ್‌ಸಿ ಕೋಡ್ ಬದಲಾಗಿದೆ. ಬ್ಯಾಂಕ್ ನಿಗದಿಪಡಿಸಿದ ಗಡುವಿನೊಳಗೆ ಈ ಎರಡೂ ಬ್ಯಾಂಕ್ ಗ್ರಾಹಕರು ಹೊಸ ಚೆಕ್ ಬುಕ್, ಪಾಸ್ಬುಕ್ ಪಡೆಯಬೇಕಾಗುತ್ತದೆ. ಗ್ರಾಹಕರು ಬ್ಯಾಂಕ್ ಶಾಖೆ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ಮೂಲಕ ಹೊಸ ಪಿಎನ್‌ಬಿ ಚೆಕ್ ಬುಕ್ ತೆಗೆದುಕೊಳ್ಳಬಹುದು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿದೆ.
ಈ ಎರಡೂ ಬ್ಯಾಂಕುಗಳ ಖಾತೆದಾರರಿಗೆ ಪಿಎನ್‌ಬಿ ಈ ಹಿಂದೆ ಹೊಸ ಐಎಫ್‌ಎಸ್‌ಸಿ ಕೋಡ್ ಮತ್ತು ಎಂಐಸಿಆರ್ ನೀಡಿತ್ತು. ಗ್ರಾಹಕರಿಗೆ ಈ ಮಾಹಿತಿ ಇನ್ನೂ ಸಿಕ್ಕಿಲ್ಲವೆಂದ್ರೆ ಎಸ್‌ಎಂಎಸ್ ಮೂಲಕ ಬ್ಯಾಂಕ್‌ಗೆ ಮಾಹಿತಿ ನೀಡಬೇಕಾಗುತ್ತದೆ. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಯುಪಿಜಿಆರ್ ಸ್ಪೇಸ್ ಖಾತೆ ಸಂಖ್ಯೆಯ ಕೊನೆಯ 4 ಅಂಕೆಗಳನ್ನು ಬರೆಯುವ ಮೂಲಕ 9264092640 ಗೆ ಎಸ್‌ಎಂಎಸ್ ಕಳುಹಿಸಬಹುದು.