ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿರುವ ಮಧ್ಯೆಯೇ ದೇಶದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಸ್ವಂತ ಉದ್ಯೋಗ ಶುರು ಮಾಡುವ ಮಹಿಳೆಯರಿಗೆ ಬ್ಯಾಂಕ್ ಆರ್ಥಿಕ ನೆರವು ನೀಡಲಿದೆ. ಟ್ವೀಟರ್ ನಲ್ಲಿ ಬ್ಯಾಂಕ್ ಈ ಬಗ್ಗೆ ಮಾಹಿತಿ ನೀಡಿದೆ.
ನಿಮ್ಮ ಉದ್ಯೋಗವನ್ನು ಹೊಸ ಯೋಜನೆಯೊಂದಿಗೆ ಮುಂದುವರೆಸಿ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಟ್ವಿಟ್ ಮಾಡಿದೆ. ಮಹಿಳಾ ಉದ್ಯಮ ನಿಧಿ ಸೇರಿದಂತೆ ಬ್ಯಾಂಕ್ ನ ಅನೇಕ ಯೋಜನೆಗಳಿಂದ ಮಹಿಳಾ ಉದ್ಯೋಗಿಗಳು ಲಾಭ ಪಡೆಯಬಹುದೆಂದು ಬ್ಯಾಂಕ್ ಹೇಳಿದೆ. ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
ಬ್ಯಾಂಕ್ ಮಹಿಳಾ ಉದ್ಯಮ ನಿಧಿ ಯೋಜನೆಯಲ್ಲಿ ಸಾಲ ಸೌಲಭ್ಯ ನೀಡುತ್ತದೆ. ಈ ಯೋಜನೆಯಡಿ ಸಾಲ ಪಡೆದು ನೀವು ಉದ್ಯೋಗ ಶುರು ಮಾಡಬಹುದು.
ಮಹಿಳಾ ಸಮೃದ್ಧಿ ಯೋಜನೆ ಕೂಡ ಮಹಿಳಾ ಉದ್ಯಮಿಗಳಿಗೆ ನೆರವಾಗಲಿದೆ. ಇದ್ರಲ್ಲಿ ನಾಲ್ಕು ರೀತಿಯ ಸಹಾಯ ಮಹಿಳಾ ಉದ್ಯಮಿಗಳಿಗೆ ಸಿಗಲಿದೆ. ಇದ್ರಿಂದ ನಿಮ್ಮ ಮೂಲಸೌಕರ್ಯವನ್ನು ಹೆಚ್ಚಿಸಿಕೊಂಡು ವ್ಯಾಪಾರ ಶುರು ಮಾಡಬಹುದು.
ಯಾವುದೇ ಮಹಿಳೆ ಮನೆಯಲ್ಲೇ ಆಹಾರ ತಯಾರಿಸುವ ಬ್ಯುಸಿನೆಸ್ ಶುರು ಮಾಡಲು ಬಯಸಿದ್ರೆ ಅದಕ್ಕೂ ಬ್ಯಾಂಕ್ ಸಾಲ ಸೌಲಭ್ಯ ನೀಡುತ್ತದೆ. ಇದಕ್ಕೆ ಬೇಕಾದ ವಸ್ತು, ಪಾತ್ರೆ, ಫ್ರಿಜ್, ಕೂಲರ್ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಹಣದ ಸಹಾಯ ಸಿಗಲಿದೆ.
ಇದಲ್ಲದೆ ಬ್ಯಾಂಕ್ ಮಹಿಳಾ ಸಶಕ್ತಿಕರಣ ಯೋಜನೆ ನೀಡ್ತಿದೆ. ಬ್ಯುಸಿನೆಸ್ ಶುರು ಮಾಡಲು ಬ್ಯಾಂಕ್ ಈ ಯೋಜನೆಯಡಿ ಸಾಲ ಸೌಲಭ್ಯ ನೀಡುತ್ತದೆ.