alex Certify ರಸ್ತೆ ಬದಿ ಆಹಾರ ಮಾರಾಟ ಮಾಡುವವರಿಗೆ ಮೋದಿ ಸರ್ಕಾರದಿಂದ ‘ಬಂಪರ್’ ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಬದಿ ಆಹಾರ ಮಾರಾಟ ಮಾಡುವವರಿಗೆ ಮೋದಿ ಸರ್ಕಾರದಿಂದ ‘ಬಂಪರ್’ ಕೊಡುಗೆ

ರಸ್ತೆ ಬದಿಯ ಆಹಾರ ಮಾರಾಟಗಾರರಿಗೆ ಸಹಾಯ ಮಾಡಲು ಮೋದಿ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಪ್ರಧಾನ ಮಂತ್ರಿ ಬೀದಿ ಮಾರಾಟಗಾರರ ಸ್ವಾವಲಂಬಿ ನಿಧಿ (ಪಿ ಎಂ ಸ್ವನಿಧಿ ಯೋಜನೆ) ಶುರು ಮಾಡಿದೆ.

ಈ ಯೋಜನೆ ಅಡಿಯಲ್ಲಿ ನಗರಾಭಿವೃದ್ಧಿ ಸಚಿವಾಲಯವು ಆನ್‌ಲೈನ್ ಆಹಾರ ಮಾರಾಟ ಕಂಪನಿಯಾದ ಜೊಮಾಟೊ ಜೊತೆ ಒಪ್ಪಂದ ಮಾಡಿಕೊಂಡಿದೆ. ಸ್ವಿಗ್ಗಿ ಜೊತೆ ಸರ್ಕಾರ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದೆ.

ಕೇಂದ್ರ ಸರ್ಕಾರ ಮತ್ತು ಸ್ವಿಗ್ಗಿ, ಜೊಮಾಟೊ ನಡುವಿನ ಒಪ್ಪಂದದ ನಂತರ  ಬೀದಿ ಬದಿ ವ್ಯಾಪಾರಿಗಳು ಆಹಾರ ಮತ್ತು ಪಾನೀಯಕ್ಕಾಗಿ ಆನ್‌ಲೈನ್ ಆದೇಶಗಳನ್ನು ತೆಗೆದುಕೊಂಡ ನಂತರ ಮನೆಗೆ ಡಿಲೆವರಿ ಮಾಡಬಹುದು. ಇದು ಒಂದು ಕಡೆ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಈ ವಲಯಕ್ಕೆ ಜೀವ ತುಂಬುತ್ತದೆ.

ಕೊರೊನಾ ಬಿಕ್ಕಟ್ಟಿನಿಂದಾಗಿ ಲಕ್ಷಾಂತರ ಬೀದಿ ಆಹಾರ ಮಾರಾಟಗಾರರ ಕೆಲಸಕ್ಕೆ ತೊಂದೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆ ಶುರು ಮಾಡಿದೆ. ಆರು ನಗರಗಳಲ್ಲಿ 300 ಆಹಾರ ಮಾರಾಟಗಾರರಿಗೆ ತರಬೇತಿ ನೀಡುವ ಮೂಲಕ ಯೋಜನೆಯನ್ನು ಪ್ರಾರಂಭಿಸುವುದಾಗಿ ಜೊಮಾಟೊ ತಿಳಿಸಿದೆ.

ಈ ಒಪ್ಪಂದದ ಪ್ರಕಾರ, ಜೊಮಾಟೊ ಈ ರಸ್ತೆ ಮಾರಾಟಗಾರರಿಗೆ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ತರಬೇತಿ ನೀಡಲಿದೆ. ಪಾನ್ ಕಾರ್ಡ್, ಎಫ್‌ಎಸ್‌ಎಸ್‌ಎಐ ನೋಂದಣಿ, ಆಹಾರ ಮೆನು ಡಿಜಿಟಲೀಕರಣ ಮತ್ತು ಆಹಾರದ ಬೆಲೆಯನ್ನು ಸರಿಪಡಿಸಲು ಸಹ ಅವರಿಗೆ ಸಹಾಯ ಮಾಡುತ್ತದೆ.

ಪಿಎಂ ಸ್ವನಿಧಿ ಯೋಜನೆಯಡಿ ಮಾರಾಟಗಾರರು 10,000 ರೂಪಾಯಿಗಳ ಸಾಲವನ್ನು ವರ್ಕಿಂಗ್ ಕ್ಯಾಪಿಟಲ್ ಸಾಲವಾಗಿ ತೆಗೆದುಕೊಳ್ಳಬಹುದು. ಇದನ್ನು 1 ವರ್ಷದಲ್ಲಿ ಮಾಸಿಕ ಕಂತುಗಳಲ್ಲಿ ಪಾವತಿಸಬೇಕಾಗುತ್ತದೆ. ಸಾಲವನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿಸಿದರೆ, ತ್ರೈಮಾಸಿಕ ಆಧಾರದ ಮೇಲೆ ವಾರ್ಷಿಕವಾಗಿ ಶೇಕಡಾ 7ರಷ್ಟು ಸಬ್ಸಿಡಿಯನ್ನು ಮಾರಾಟಗಾರರ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...