ದೇಶದ ಮೊದಲ ಚಾಲಕರಹಿತ ರೈಲು ಸೇವೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಚಾಲನೆ ಕೊಡಲಿದ್ದಾರೆ. ದೆಹಲಿ ಮೆಟ್ರೋನ ಮೆಗೆಂಟಾ ಲೈನ್‌ನಲ್ಲಿ ಈ ಚಾಲಕರಹಿತ ರೈಲು ಸಂಚರಿಸಲಿದೆ.
ಇದೇ ವೇಳೆ ’ಕಾಮನ್ ಮೊಬಿಲಿಟಿ ಕಾರ್ಡ್’ ಸೇವೆಗೂ ಸಹ ಪ್ರಧಾನಿ ಚಾಲನೆ ಕೊಡಲಿದ್ದಾರೆ. ಈ ಸೇವೆಯ ಅಡಿ, ದೇಶದ ಯಾವುದೇ ಮೂಲೆಯವರಾದರೂ ರುಪೇ ಡಿಬಿಟ್ ಕಾರ್ಡ್ ಇದ್ದಲ್ಲಿ, ದೆಹಲಿ ಮೆಟ್ರೋದ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್‌ನಲ್ಲಿ ಸಂಚರಿಸಬಹುದಾಗಿದೆ. ಈ ಸೇವೆಯು 2022ರ ಅಂತ್ಯಕ್ಕೆ ದೆಹಲಿ ಮೆಟ್ರೋ ಜಾಲಾದ್ಯಂತ ಲಭ್ಯವಾಗಲಿದೆ.
ಜಗತ್ತಿನಾದ್ಯಂತ ಇರುವ ಮೆಟ್ರೋ ರೈಲುಗಳ ಜಾಲದ ಪೈಕಿ ಕೇವಲ 7%ನಷ್ಟು ಮೆಟ್ರೋ ಸೇವೆಗಳು ಮಾತ್ರವೇ ಚಾಲಕರಹಿತವಾಗಿವೆ.
ದೇಶಾದ್ಯಂತ 18 ನಗರಗಳಲ್ಲಿ 702 ಕಿಮೀನಷ್ಟು ಮೆಟ್ರೋ ಲೈನ್‌ಗಳಿವೆ. ಮುಂದಿನ ವರ್ಷಗಳಲ್ಲಿ ದೇಶದಲ್ಲಿ ಮೆಟ್ರೋ ಸೇವೆ ಇರುವ ನಗರಗಳ ಸಂಖ್ಯೆ 27ಕ್ಕೆ ಏರಲಿದೆ.