ನವದೆಹಲಿ: ಪಾರದರ್ಶಕ ತೆರಿಗೆ ಪ್ರಾಮಾಣಿಕರಿಗೆ ಗೌರವ ಎನ್ನುವ ತತ್ವದಡಿ ಇಂದು ಪ್ರಧಾನಿಯಿಂದ ತೆರಿಗೆ ಸುಧಾರಣೆ ಪ್ರಕಟಿಸಲಾಗುವುದು.
ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸಲು, ನೂತನ ತೆರಿಗೆ ಸುಧಾರಣೆ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ನೀಡಲಿದ್ದಾರೆ. ನೇರ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ತೆರಿಗೆದಾರ ಸ್ನೇಹಿಯಾಗಿಸಲು ಮತ್ತು ಪ್ರಾಮಾಣಿಕ ತೆರಿಗೆದಾರರ ಗೌರವಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
ಬಜೆಟ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆದಾರರ ಚಾರ್ಟರ್ ಜಾರಿಗೊಳಿಸುವುದಾಗಿ ಘೋಷಿಸಿದ್ದರು. ಅದರ ಭಾಗವಾಗಿ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ನಿರ್ದಿಷ್ಟ ಕಾಲಮಿತಿಯೊಳಗೆ ಸೇವೆಗಳು ಕಡ್ಡಾಯವಾಗಿ ಸಿಗುವಂತೆ ಮಾಡುವ ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ಪ್ರಕಟಿಸಲಿದ್ದಾರೆ. ತೆರಿಗೆ ಪಾವತಿ ತ್ವರಿತ, ಸರಳಗೊಳಿಸುವುದು ಸೇರಿದಂತೆ ಹಲವು ಸುಧಾರಣೆ ತರಲಾಗುವುದು ಎಂದು ಹೇಳಲಾಗಿದೆ.