ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಒನ್ ನೇಷನ್ ಒನ್ ರೇಷನ್ ಕಾರ್ಡ್ ಮಾದರಿಯಲ್ಲಿ ʼಒನ್ ನೇಷನ್ ಒನ್ ಹೆಲ್ತ್ ಕಾರ್ಡ್ʼ ತರಲು ಸಿದ್ಧತೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ಆಗಸ್ಟ್ 15 ರಂದು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಘೋಷಿಸುವ ಸಾಧ್ಯತೆಯಿದೆ. ಈ ಯೋಜನೆಯಡಿ ದೇಶದ ಪ್ರತಿಯೊಬ್ಬ ನಾಗರಿಕರ ಆರೋಗ್ಯ ಮಾಹಿತಿಯು ಒಂದೇ ಕಡೆ ಸಿಗಲಿದೆ.
ವರದಿಯ ಪ್ರಕಾರ, ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಕೇಂದ್ರ ಸಚಿವ ಸಂಪುಟದಿಂದ ತಾತ್ವಿಕವಾಗಿ ಅನುಮೋದನೆ ಪಡೆದಿದೆ. ಈ ವಾರದ ಅಂತ್ಯದ ವೇಳೆಗೆ ಇದ್ರ ಬಗ್ಗೆ ಅಧಿಕೃತ ಅನುಮೋದನೆ ಸಿಗಲಿದೆ. ಆಗಸ್ಟ್ 15 ರಂದು ಪಿಎಂ ಇದನ್ನು ಪ್ರಕಟಿಸಲಿದ್ದಾರೆ.
ಸರ್ಕಾರದ ಒನ್ ನೇಷನ್ ಒನ್ ಹೆಲ್ತ್ ಕಾರ್ಡ್ ಯೋಜನೆಯ ಮೂಲಕ ಪ್ರತಿಯೊಬ್ಬರೂ ಹೆಲ್ತ್ ಕಾರ್ಡ್ ತಯಾರಿಸಬೇಕು. ಚಿಕಿತ್ಸೆ ಮತ್ತು ಪರೀಕ್ಷೆಯ ಸಂಪೂರ್ಣ ಮಾಹಿತಿಯನ್ನು ಈ ಕಾರ್ಡ್‌ನಲ್ಲಿ ಉಳಿಯಲಿದೆ. ಇದರ ಪ್ರಯೋಜನವೆಂದರೆ ದೇಶದ ಯಾವುದೇ ಆಸ್ಪತ್ರೆ ಅಥವಾ ವೈದ್ಯರ ಬಳಿ ಚಿಕಿತ್ಸೆಗಾಗಿ ಹೋದಾಗ, ಹಿಂದಿನ ಔಷಧಿ ಚೀಟಿಯನ್ನು ತೆಗೆದುಕೊಂಡು ಹೋಗಬೇಕಾಗಿಲ್ಲ. ಕಾರ್ಡ್ ನಲ್ಲಿಯೇ ಎಲ್ಲ ಮಾಹಿತಿ ವೈದ್ಯರಿಗೆ ಲಭ್ಯವಾಗುತ್ತದೆ.