ನವದೆಹಲಿ: ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2022 -23 ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.
ನಾಲ್ಕನೇ ಬಾರಿಗೆ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಕಾಗದ ರಹಿತ ಬಜೆಟ್
ಬಜೆಟ್ ಪ್ರತಿಯ ಸೂಟ್ ಕೇಸ್ ಬದಲು ಈ ಬಾರಿಯೂ ಟ್ಯಾಬ್ಲೆಟ್ ಸಂಪ್ರದಾಯ ಮುಂದುವರೆಸಲಾಗಿದೆ.
90 ರಿಂದ 120 ನಿಮಿಷಗಳ ಕಾಲ ಬಜೆಟ್ ಮಂಡಿಸುವ ಸಾಧ್ಯತೆಯಿದೆ.
2020ರಲ್ಲಿ ದಾಖಲೆಯ 160 ನಿಮಿಷ ಬಜೆಟ್ ಮಂಡಿಸಿದ್ದರು.
2022 -23 ನೇ ಸಾಲಿನ ಕೇಂದ್ರದ ಪೂರ್ಣಪ್ರಮಾಣದ ಬಜೆಟ್ ಇಂದು ಮಂಡನೆಯಾಗಲಿದೆ
2019, 2020 ಮತ್ತು 2021 ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದರು.
ಇಂದು ನಾಲ್ಕನೇ ಬಾರಿಗೆ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.
ಇದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ 10ನೇ ಬಜೆಟ್ ಆಗಿದೆ.
ಕೊರೋನಾ ಕಾರಣದಿಂದ ಬಜೆಟ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ.
ಕಳೆದ ಎರಡು ವರ್ಷಗಳಿಂದ ಬಜೆಟ್ ಪ್ರತಿ ಮುದ್ರಿಸುತ್ತಿಲ್ಲ.
ಡಿಜಿಟಲ್ ರೂಪದಲ್ಲಿ ಇರಲಿದೆ ಈ ಬಾರಿಯ ಕೇಂದ್ರ ಬಜೆಟ್.