ಕೊರೊನಾ ಸಂದರ್ಭದಲ್ಲಿ ಅನ್ನದಾತರಿಗೆ ಖುಷಿ ಸುದ್ದಿಯೊಂದಿದೆ. ಶೀಘ್ರದಲ್ಲಿಯೇ ರೈತರ ಖಾತೆಗೆ 2 ಸಾವಿರ ರೂಪಾಯಿ ಬರಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕ 6000 ರೂಪಾಯಿ ನೀಡುತ್ತದೆ. 8 ನೇ ಕಂತಿನ ಹಣವನ್ನು ಸರ್ಕಾರ ಶೀಘ್ರವೇ ರೈತರಿಗೆ ನೀಡಲಿದೆ. ಈ ಯೋಜನೆಯಡಿ ಸುಮಾರು 9.5 ಕೋಟಿ ಫಲಾನುಭವಿ ರೈತರು 2 ಸಾವಿರ ರೂಪಾಯಿ ಪಡೆಯಲಿದ್ದಾರೆ.
ಸಾಮಾನ್ಯವಾಗಿ ಯೋಜನೆಯ ಮೊದಲ ಕಂತು ಏಪ್ರಿಲ್ 20ರೊಳಗೆ ರೈತರ ಖಾತೆ ಸೇರಲಿದೆ. ಮೊದಲ ಕಂತು ಜುಲೈ 31ರೊಳಗೆ ಯಾವಾಗ ಬೇಕಾದ್ರೂ ರೈತರ ಖಾತೆಗೆ ಬರಬಹುದು. ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ, 2 ಹೆಕ್ಟೇರ್ ಅಥವಾ 5 ಎಕರೆ ಕೃಷಿ ಭೂಮಿ ಹೊಂದಿರುವ ರೈತರು ಮಾತ್ರ ಇದ್ರ ಲಾಭ ಪಡೆಯಲಿದ್ದಾರೆ. ಭೂಮಿ ಯಾರ ಹೆಸರಿನಲ್ಲಿದೆ ಅವರಿಗೆ ಮಾತ್ರ ಹಣ ಸಿಗಲಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಲಾಭ ಸಿಗುವುದಿಲ್ಲ.
ಮನೆಯಲ್ಲೇ ಕುಳಿತು ನೀವು ಹೆಸರು ನೋಂದಾಯಿಸಿಕೊಳ್ಳಬಹುದು. ಭೂಮಿಗೆ ಸಂಬಂಧಿಸಿದ ದಾಖಲೆ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡಬೇಕಾಗುತ್ತದೆ. https://pmkisan.gov.in ಗೆ ಹೋಗಿ ಅಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಕೊರೊನಾ ಹಿನ್ನಲೆಯಲ್ಲಿ ಫಾರ್ಮ್ ಪರಿಶೀಲನೆ ವಿಳಂಬವಾಗ್ತಿದೆ.