ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗೆ ಸೆಪ್ಟೆಂಬರ್ 30 ರಂದು 12 ನೇ ಕಂತು ಜಮಾ ಆಗುವ ಸಾಧ್ಯತೆ ಇದೆ.
ನವರಾತ್ರಿ ಉತ್ಸವದ ಹೊತ್ತಲ್ಲೇ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆಯ ಕಂತು ವರ್ಗಾಯಿಸುವ ಸಾಧ್ಯತೆಯಿದೆ. ಭೂ ದಾಖಲೆಗಳು ಮತ್ತು ಫಲಾನುಭವಿಗಳ ಇತರ ವಿವರಗಳ ಸರಿಯಾದ ಪರಿಶೀಲನೆಯಿಂದಾಗಿ ಇತ್ತೀಚಿನ ಪಾವತಿ ವಿಳಂಬವಾಗಿದೆ ಎಂದು ಹೇಳಲಾಗಿದೆ.
ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಯೋಜನೆಯ ಲಾಭ ಪಡೆಯುವ ವಿವಿಧ ರಾಜ್ಯಗಳ ಲಕ್ಷಾಂತರ ಅನರ್ಹ ರೈತರನ್ನು ಕೇಂದ್ರ ಸರ್ಕಾರ ಗುರುತಿಸಿದೆ. ರೈತರ ವಿವರಗಳನ್ನು ಪರಿಶೀಲಿಸುವಾಗ ಕೇಂದ್ರವು ಈ ಬಾರಿ ಹೆಚ್ಚಿನ ಜಾಗರೂಕತೆ ವಹಿಸಿದೆ.
ಸೆಪ್ಟೆಂಬರ್ 30 ರಂದು ರೈತರ ಖಾತೆಗಳಿಗೆ 12 ನೇ ಕಂತಿನ 2000 ರೂ. ವರ್ಗಾಯಿಸುವ ನಿರೀಕ್ಷೆಯಿದೆ. ಇಲ್ಲಿಯವರೆಗೆ ಯೋಜನೆಯ 11 ಕಂತುಗಳನ್ನು ವರ್ಗಾಯಿಸಲಾಗಿದೆ.
ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುವ ಜಮೀನು ಹೊಂದಿರುವ ಎಲ್ಲಾ ರೈತ ಕುಟುಂಬಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಪ್ರತಿ ಕಂತು ನೀಡಲಾಗುತ್ತದೆ. ಕೇಂದ್ರ ಪ್ರಾಯೋಜಿತ ಯೋಜನೆ ಇದಾಗಿದ್ದು ವರ್ಷಕ್ಕೆ 6,000 ರೂ. ನೀಡಲಾಗುವುದು. ಕೇಂದ್ರವು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುತ್ತದೆ. ಯೋಜನೆಯ 11 ನೇ ಕಂತನ್ನು ಮೇ 31, 2022 ರಂದು ಬಿಡುಗಡೆ ಮಾಡಲಾಗಿದೆ.
ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿ ಸ್ಥಿತಿ ಪರಿಶೀಲಿಸಲು ಮಾಹಿತಿ
pmkisan.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
‘ಫಾರ್ಮರ್ಸ್ ಕಾರ್ನರ್’ ವಿಭಾಗದ ಮೇಲೆ ಕ್ಲಿಕ್ ಮಾಡಿ
ರೈತರ ವಿಭಾಗದಲ್ಲಿ, ‘ಫಲಾನುಭವಿ ಸ್ಥಿತಿ’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಪರ್ಯಾಯವಾಗಿ ಸ್ಥಿತಿಯನ್ನು ಪರಿಶೀಲಿಸಲು ನೀವು ನೇರವಾಗಿ ಲಿಂಕ್ ಗೆ ಭೇಟಿ ನೀಡಬಹುದು- https://pmkisan.gov.in/BeneficiaryStatus.aspx,
ಮುಖಪುಟದಲ್ಲಿ ವಿವರಗಳಲ್ಲಿ ಯಾವುದಾದರೂ ಒಂದನ್ನು ನಮೂದಿಸಿ ಆಧಾರ್ ಸಂಖ್ಯೆ, PM ಕಿಸಾನ್ ಖಾತೆ ಸಂಖ್ಯೆ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ
ನಿಮ್ಮ ವಿವರಗಳನ್ನು ಭರ್ತಿ ಮಾಡಿದ ನಂತರ, ಗೆಟ್ ಡೇಟಾ ಆಯ್ಕೆಯನ್ನು ಕ್ಲಿಕ್ ಮಾಡಿ.
ನಿಮ್ಮ ಫಲಾನುಭವಿಯ ಸ್ಥಿತಿಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.