ಹೋಳಿ ಹಬ್ಬದ ಸಂಭ್ರಮದಲ್ಲಿರುವ ದೇಶದ ರೈತರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯ ಎಂಟನೇ ಕಂತು ಶೀಘ್ರವೇ ರೈತರ ಖಾತೆಗೆ ಬರಲಿದೆ.
ಈ ಯೋಜನೆಯಡಿ ಕೇಂದ್ರ ಸರ್ಕಾರ ವಾರ್ಷಿಕವಾಗಿ 6 ಸಾವಿರ ರೂಪಾಯಿಗಳನ್ನು ದೇಶದ ರೈತರ ಖಾತೆಗೆ ವರ್ಗಾಯಿಸುತ್ತದೆ. 6 ಸಾವಿರ ರೂಪಾಯಿಗಳ ಈ ಮೊತ್ತವನ್ನು ಸರ್ಕಾರ ನೇರವಾಗಿ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ. ಹೋಳಿ ನಂತರ ನೋಂದಾಯಿತ ರೈತರ ಎಂಟನೇ ಕಂತು ಅವರ ಖಾತೆಗೆ ಬರಲಿದೆ. ನಿಮ್ಮ ಹೆಸರು ಪಟ್ಟಿಯಲ್ಲಿದೆಯಾ? 8ನೇ ಕಂತು ನಿಮ್ಮ ಖಾತೆ ಸೇರಲಿದೆಯೆ ಎಂಬುದನ್ನು ನೀವು ವೆಬ್ಸೈಟ್ ನಲ್ಲಿ ಚೆಕ್ ಮಾಡಬಹುದು.
ಪಿಎಂ ಕಿಸಾನ್ ಯೋಜನೆ https://pmkisan.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಮುಖಪುಟದಲ್ಲಿ ಫಾರ್ಮರ್ಸ್ ಕಾರ್ನರ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಫಲಾನುಭವಿಗಳ ಪಟ್ಟಿಯ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆರಿಸಬೇಕಾಗುತ್ತದೆ. ಗೆಟ್ ರಿಪೋರ್ಟ್ ಕ್ಲಿಕ್ ಮಾಡಬೇಕು. ಫಲಾನುಭವಿಗಳ ಪೂರ್ಣ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.
ಈ ಯೋಜನೆಗೆ ಹೆಸರು ನೊಂದಾಯಿಸಲು ಬಯಸುವ ರೈತರು ಮೊದಲು https://pmkisan.gov.in/ ನಲ್ಲಿ ನೀಡಿರುವ ಫಾರ್ಮರ್ ಕಾರ್ನರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನೋಂದಾಯಿಸಿಕೊಳ್ಳುವ ಆಯ್ಕೆ ಸಿಗಲಿದೆ. ಫಾರ್ಮರ್ ಕಾರ್ನರ್ ಟ್ಯಾಬ್‌ನಲ್ಲಿ ಹೊಸ ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಆಗ ಹೊಸ ಪುಟ ತೆರೆಯುತ್ತದೆ. ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತ್ರ ನೋಂದಣಿ ಫಾರ್ಮ್ ತೆರೆಯುತ್ತದೆ. ಅಲ್ಲಿ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಬೇಕು. ಹೆಸರು, ಲಿಂಗ, ವರ್ಗ, ಆಧಾರ್ ಕಾರ್ಡ್, ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್, ವಿಳಾಸ, ಮೊಬೈಲ್ ಸಂಖ್ಯೆ, ಹುಟ್ಟಿದ ದಿನಾಂಕ ಇತ್ಯಾದಿಗಳನ್ನು ನೀಡಬೇಕು. ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಸಲ್ಲಿಸುವ ಆಯ್ಕೆ ಕ್ಲಿಕ್ ಮಾಡಬೇಕು. ನಿಮ್ಮ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತ್ರ ಯೋಜನೆ ಲಾಭ ನಿಮಗೆ ಸಿಗಲಿದೆ.