ನವದೆಹಲಿ: ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯ ಎಂಟನೇಯ ಹಾಗೂ 2020-21 ರ ಹಣಕಾಸು ವರ್ಷದ ಕೊನೆಯ ಕಂತು ಮಾರ್ಚ್ ಅಂತ್ಯದ ವೇಳೆಗೆ ರೈತರ ಖಾತೆಗೆ ಜಮಾ ಆಗಲಿದೆ.
ಪಿಎಂ ಕಿಸಾನ್ ಸಮ್ಮನ್ ನಿಧಿ ಅಡಿಯಲ್ಲಿ ಪ್ರತಿವರ್ಷ ಮೂರು ಕಂತುಗಳಲ್ಲಿ ರೈತರ ಖಾತೆಗೆ ನಗದು ವರ್ಗಾವಣೆ ಮಾಡಲಾಗುವುದು.
ಮೊದಲ ಕಂತು – ಏಪ್ರಿಲ್- ಜುಲೈ
ಎರಡನೇ ಕಂತು – ಆಗಸ್ಟ್-ನವೆಂಬರ್
ಮೂರನೇ ಕಂತು – ಡಿಸೆಂಬರ್-ಮಾರ್ಚ್
ಪಿಎಂ ಕಿಸಾನ್ ವೆಬ್‌ಸೈಟ್ ಮೂಲಕ ನಿಮ್ಮ ಹೆಸರು ಪರಿಶೀಲಿಸುವುದ ಬಗ್ಗೆ ಮಾಹಿತಿ
Pmkisan.gov.in ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ
ಬಲಭಾಗದಲ್ಲಿ ಫಾರ್ಮರ್ಸ್ ಕಾರ್ನರ್ ಕಾಣಿಸುತ್ತದೆ.
ಫಾರ್ಮರ್ಸ್ ಕಾರ್ನರ್ ಕ್ಲಿಕ್ ಮಾಡಿ
ಈಗ ಆಯ್ಕೆಯಿಂದ, ಫಲಾನುಭವಿ ಸ್ಥಿತಿ ಕ್ಲಿಕ್ ಮಾಡಿ
ನಿಮ್ಮ ಸ್ಥಿತಿಯನ್ನು ನೋಡಲು ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯಂತಹ ಕೆಲವು ವಿವರಗಳನ್ನು ನೀವು ನೀಡಬೇಕಾಗುತ್ತದೆ. ಮೇಲಿನ ಕಾರ್ಯವಿಧಾನವನ್ನು ನೀವು ಪೂರ್ಣಗೊಳಿಸಿದ ನಂತರ, ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ ಅದನ್ನು ನೀವು ಕಾಣಬಹುದು.
ಮೊಬೈಲ್ ಅಪ್ಲಿಕೇಶನ್ ಮೂಲಕ PM KISAN ಪರಿಶೀಲಿಸುವುದು
ಮೊಬೈಲ್ ಅಪ್ಲಿಕೇಶನ್ ಮೂಲಕ ನಿಮ್ಮ ಹೆಸರನ್ನು ಪರಿಶೀಲಿಸಲು, ನೀವು ಮೊದಲು ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಒಮ್ಮೆ ನೀವು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ನೀವು ಎಲ್ಲಾ ವಿವರಗಳಿಗೆ ಪ್ರವೇಶವನ್ನು ಹೊಂದಿರುತ್ತೀರಿ.
ಪಿಎಂ-ಕಿಸಾನ್ ಯೋಜನೆ 7 ನೇ ಕಂತು
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ(ಪಿಎಂ-ಕಿಸಾನ್) ಅಡಿಯಲ್ಲಿ 7 ನೇ ಕಂತಿನ ಹಣವನ್ನು ಡಿಸೆಂಬರ್ 25 ರಂದು ಬಿಡುಗಡೆ ಮಾಡಿದ್ದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 9 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 18,000 ಕೋಟಿ ರೂ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಬಿಡುಗಡೆ ಮಾಡಲಾಗಿತ್ತು.
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ (ಪಿಎಂ-ಕಿಸಾನ್) ಯೋಜನೆಯನ್ನು ಪಿಎಂ ಮೋದಿ ಅವರು 2019 ರಲ್ಲಿ ಪ್ರಾರಂಭಿಸಿದರು. ದೇಶಾದ್ಯಂತದ ಎಲ್ಲ ರೈತ ಕುಟುಂಬಗಳಿಗೆ ಕೃಷಿ ಭೂಮಿಯನ್ನು ಹೊಂದಿರುವವರಿಗೆ ಕೆಲವು ವಿನಾಯಿತಿಗೆ ಒಳಪಟ್ಟು ಆದಾಯದ ನೆರವು ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಈ ಯೋಜನೆಯಡಿ ವರ್ಷಕ್ಕೆ 6000 ರೂ.ಗಳನ್ನು ತಲಾ 4 ತಿಂಗಳ 3 ಕಂತುಗಳಲ್ಲಿ ತಲಾ 2000 ರೂ.ಗಳಲ್ಲಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತದೆ.
ಸಣ್ಣ ರೈತರ ಕುಟುಂಬಗಳಿಗೆ ಮಾತ್ರ PM-KISAN ಯೋಜನೆ?
ಪಿಎಂ-ಕಿಸಾನ್ ಯೋಜನೆಯನ್ನು ಪ್ರಾರಂಭಿಸಿದಾಗ(ಫೆಬ್ರವರಿ, 2019), ಇದರ ಪ್ರಯೋಜನಗಳನ್ನು ಸಣ್ಣ ಮತ್ತು ಕನಿಷ್ಠ ರೈತರ ಕುಟುಂಬಗಳಿಗೆ ಮಾತ್ರ ಒಪ್ಪಿಕೊಳ್ಳಲಾಗುತ್ತಿತ್ತು, ಜೊತೆಗೆ 2 ಹೆಕ್ಟೇರ್ ವರೆಗೆ ಒಟ್ಟು ಭೂಮಿ ಹೊಂದಿದವರಿಗೆ ಸೌಲಭ್ಯ ನೀಡಲಾಗಿತ್ತು. ಈ ಯೋಜನೆಯನ್ನು ನಂತರ ಜೂನ್ 2019 ರಲ್ಲಿ ಪರಿಷ್ಕರಿಸಿ ಎಲ್ಲಾ ರೈತ ಕುಟುಂಬಗಳಿಗೆ ಅವರ ಜಮೀನುಗಳ ಗಾತ್ರವನ್ನು ಲೆಕ್ಕಿಸದೆ ವಿಸ್ತರಿಸಲಾಯಿತು.
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ವರ್ಷಕ್ಕೆ 6,000 ರೂ.ಗಳ ಲಾಭವನ್ನು ದೇಶದ ಎಲ್ಲಾ 14.5 ಕೋಟಿ ರೈತರಿಗೆ ವಿಸ್ತರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಪಿಎಂ-ಕಿಸಾನ್ ಯೋಜನೆಯಿಂದ ಯಾರನ್ನು ಹೊರಗಿಡಲಾಗಿದೆ?
ಪಿಎಂ-ಕಿಸಾನ್‌ನಿಂದ ಹೊರಗಿಡಲ್ಪಟ್ಟವರಲ್ಲಿ ಸಾಂಸ್ಥಿಕ ಭೂಮಾಲೀಕರು, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ರೈತ ಕುಟುಂಬಗಳು, ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ರಾಜ್ಯ ಅಥವಾ ಕೇಂದ್ರ ಸರ್ಕಾರದ ನೌಕರರು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಸರ್ಕಾರಿ ಸ್ವಾಯತ್ತ ಸಂಸ್ಥೆಗಳು ಸೇರಿವೆ.
ವೈದ್ಯರು, ಎಂಜಿನಿಯರ್‌ಗಳು ಮತ್ತು ವಕೀಲರು ಮತ್ತು ನಿವೃತ್ತ ಪಿಂಚಣಿದಾರರು ಮಾಸಿಕ 10,000 ರೂ.ಗಿಂತ ಹೆಚ್ಚಿನ ಪಿಂಚಣಿ ಹೊಂದಿದ್ದರೆ ಮತ್ತು ಕಳೆದ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದವರು ಸಹ ಪ್ರಯೋಜನ ಪಡೆಯಲು ಅರ್ಹರಲ್ಲ.