ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಎಂಟನೇ ಕಂತುಗಾಗಿ ಕಾಯುತ್ತಿರುವ ದೇಶದ ಕೋಟ್ಯಂತರ ರೈತರಿಗೆ ಖುಷಿ ಸುದ್ದಿ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಮುಂದಿನ 8ನೇ ಕಂತಿನ ಹಣವನ್ನು ಮೇ 14 ರಂದು ಬಿಡುಗಡೆ ಮಾಡಲಿದ್ದಾರೆ. ಅಂದರೆ ಅಕ್ಷಯ್ ತೃತೀಯದಂದು ಬಿಡುಗಡೆ ಮಾಡಲಿದ್ದಾರೆ.
ದೇಶದ ರೈತರೊಂದಿಗೆ ಬೆಳಿಗ್ಗೆ 11 ಗಂಟೆಗೆ ಮಾತನಾಡುತ್ತೇವೆಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ಹೇಳಿದ್ದಾರೆ. ಕೃಷಿ ಸಚಿವಾಲಯದ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ, ಮೇ 14 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ರೈತರೊಂದಿಗೆ ಮಾತನಾಡಲಿದ್ದಾರೆ. ನಂತ್ರ ಮುಂದಿನ ಕಂತನ್ನು ಬಿಡುಗಡೆ ಮಾಡಲಿದ್ದಾರೆ.
ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, ಕೇಂದ್ರ ಸರ್ಕಾರವು ಒಂದು ವರ್ಷದಲ್ಲಿ ಸಣ್ಣ ರೈತರಿಗೆ 6000 ರೂಪಾಯಿ ನೀಡುತ್ತದೆ. ಈ ಮೊತ್ತವನ್ನು ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. 6 ಸಾವಿರ ರೂಪಾಯಿಯನ್ನು 2 ಸಾವಿರ ರೂಪಾಯಿ ಕಂತುಗಳಲ್ಲಿ ನೀಡಲಾಗುತ್ತದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪಿಎಂ ಕಿಸಾನ್ ಯೋಜನೆಗೆ ಒಲವು ತೋರಿದ್ದಾರೆ. ಇಲ್ಲಿನ ರೈತರು ಯೋಜನೆಯಡಿ ಹೆಸರು ನೋಂದಾಯಿಸಿದ್ರೆ ಇದೇ ಮೊದಲ ಬಾರಿ ಯೋಜನೆ ಕಂತು ಪಡೆಯಲಿದ್ದಾರೆ.
pmindiawebcast.nic.in ಅಥವಾ ದೂರದರ್ಶನದ ಮೂಲಕ ಪಿಎಂ ಮಾತುಕತೆ ವೀಕ್ಷಿಸಬಹುದು. ಕಾರ್ಯಕ್ರಮಕ್ಕೆ ಸೇರಲು ನಿಮ್ಮನ್ನು ಸೌಹಾರ್ದಯುತವಾಗಿ ಆಹ್ವಾನಿಸಲಾಗಿದೆ.