ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಏಳನೇ ಕಂತಿನ ಪಾವತಿ ಡಿಸೆಂಬರ್‌ನಲ್ಲಿ ಮಾಡಬೇಕಿದೆ ಎಂದು ವೇಳಾಪಟ್ಟಿ ತಿಳಿಸುತ್ತಿದೆ. ಈ ಯೋಜನೆಯ ಫಲಾನುಭವಿಗಳು ತಿಳಿದುಕೊಳ್ಳಬೇಕಾದ ಕೆಲವೊಂದು ಮಾಹಿತಿಗಳು ಇಂತಿವೆ:
ವಿತ್ತೀಯ ವರ್ಷವೊಂದರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ ಎರಡು ಕಂತುಗಳಲ್ಲಿ ಹಣ ಪಾವತಿ ಮಾಡಲಾಗುತ್ತದೆ. ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಹಾಗೂ ಡಿಸೆಂಬರ್-ಮಾರ್ಚ್ ನಡುವಿನ ಅವಧಿಗೆ ಈ ಪಾವತಿ ಮಾಡಲಾಗುತ್ತದೆ.
pmkisan.gov.in ಲಾಗಿನ್ ಆಗಿ ಅಲ್ಲಿರುವ ಕಿಸಾನ್ ಆಯ್ಕೆಯನ್ನು ಮಾಡಿ, ಫಲಾನುಭವಿಗಳ ಸ್ಟೇಟಸ್ ಅನ್ನು ನೋಡಬಹುದಾಗಿದೆ. ಈ ಮೂಲಕ ನೀವು ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಹಾಗೂ ಮೊಬೈಲ್ ಸಂಖ್ಯೆಯ ವಿವರಗಳನ್ನು ಭರ್ತಿ ಮಾಡಬೇಕು. ಇದಾದ ಬಳಿಕ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಸಂಖ್ಯೆ ಇದೆಯೋ ಇಲ್ಲವೋ ತಿಳಿಯುತ್ತದೆ.
ಇದೇ ಕೆಲಸವನ್ನು ಪಿಎಂ ಕಿಸಾನ್ ಮೊಬೈಲ್ ಆಪ್ ಮೂಲಕವೂ ಮಾಡಿಕೊಳ್ಳಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಕಿರು ತಂತ್ರಾಂಶ ಲಭ್ಯವಿದೆ.