ನವದೆಹಲಿ: ಪಿಎಂ ಜನ್ ಧನ್ ಖಾತೆದಾರರು ಯಾವುದೇ ಬ್ಯಾಲೆನ್ಸ್ ಇಲ್ಲದೆ 10,000 ರೂ. ಲಾಭ ಪಡೆಯಬಹುದಾಗಿದೆ.
ನೀವು ಪ್ರಧಾನ ಮಂತ್ರಿ ಜನ್-ಧನ್ ಯೋಜನೆಯ(PMJDY) ಖಾತೆದಾರರಾಗಿದ್ದರೆ, ಹಲವಾರು ಹಣಕಾಸಿನ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.
ಈ ಶೂನ್ಯ ಬ್ಯಾಲೆನ್ಸ್ ಖಾತೆಯಲ್ಲಿ ನೀವು 10,000 ರೂ. ವರೆಗೆ ಓವರ್ಡ್ರಾಫ್ಟ್(OD) ಸೌಲಭ್ಯ ಪಡೆಯಬಹುದು. ಓವರ್ಡ್ರಾಫ್ಟ್ ಮಿತಿಯು ಮೊದಲು 5,000 ರೂ. ಆಗಿದ್ದು, ನಂತರ 10,000 ರೂ.ಗೆ ಹೆಚ್ಚಿಸಲಾಯಿತು. 2,000 ರೂ. ವರೆಗಿನ ಓವರ್ಡ್ರಾಫ್ಟ್ ಯಾವುದೇ ಷರತ್ತುಗಳಿಲ್ಲದೆ ಲಭ್ಯವಿದೆ.
ಓವರ್ಡ್ರಾಫ್ಟ್ ಸೌಲಭ್ಯವನ್ನು ಪಡೆಯಲು, ನಿಮ್ಮ ಜನ್ ಧನ್ ಖಾತೆಯು ಕನಿಷ್ಠ 6 ತಿಂಗಳ ಹಳೆಯದಾಗಿರಬೇಕು, ಇಲ್ಲದಿದ್ದರೆ ನೀವು 2,000 ರೂ. ವರೆಗೆ ಮಾತ್ರ ಓವರ್ಡ್ರಾಫ್ಟ್ ಪಡೆಯಬಹುದು. ಓವರ್ಡ್ರಾಫ್ಟ್ಗೆ ಗರಿಷ್ಠ ವಯಸ್ಸಿನ ಮಿತಿಯನ್ನು 60 ರಿಂದ 65 ವರ್ಷಗಳಿಗೆ ಹೆಚ್ಚಿಸಲಾಗಿದೆ.
PMJDY ಖಾತೆಗಳು ನೇರ ಲಾಭ ವರ್ಗಾವಣೆ(DBT), ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(PMSBY), ಅಟಲ್ ಪಿಂಚಣಿ ಯೋಜನೆ (APY), ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಮತ್ತು ರಿಫೈನಾನ್ಸ್ ಏಜೆನ್ಸಿ ಬ್ಯಾಂಕ್ (MUDRA) ಯೋಜನೆಗೆ ಅರ್ಹವಾಗಿವೆ.
PMJDY ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15, 2014 ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದ್ದರು. ಆರ್ಥಿಕ ಸೇರ್ಪಡೆಯನ್ನು ಉತ್ತೇಜಿಸಲು ಆಗಸ್ಟ್ 28, 2014 ರಂದು ಏಕಕಾಲದಲ್ಲಿ ಪ್ರಾರಂಭಿಸಲಾಯಿತು. ಜನರು ಕೈಗೆಟುಕುವ ರೀತಿಯಲ್ಲಿ ಬ್ಯಾಂಕಿಂಗ್, ರವಾನೆ, ಕ್ರೆಡಿಟ್, ವಿಮೆ, ಪಿಂಚಣಿಗಳಂತಹ ಹಣಕಾಸು ಸೇವೆಗಳಿಗೆ ಪ್ರವೇಶವನ್ನು ಹೊಂದಲು ಈ ರಾಷ್ಟ್ರೀಯ ಮಿಷನ್ ಪ್ರಾರಂಭಿಸಲಾಗಿದೆ.