ಬಹುದಿನಗಳಿಂದ ಕಾಯುತ್ತಿದ್ದ ಮಹೀಂದ್ರಾ ಥಾರ್ SUV ಇದೀಗ ರಸ್ತೆಗೆ ಇಳಿದಿದೆ. ಅಕ್ಟೋಬರ್ ಆರಂಭದಲ್ಲಿ ಎಕ್ಸ್-ಶೋರೂಂ ಬೆಲೆ 9.8 ಲಕ್ಷ ರೂ.ಗಳಿಂದ ಆರಂಭವಾಗಲಿರುವ ಈ ವಾಹನಕ್ಕೆ ಭಾರೀ ಬೇಡಿಕೆ ಇದ್ದಂತೆ ಕಾಣುತ್ತಿದೆ.
ನವೆಂಬರ್ ಮೊದಲ ವಾರದಿಂದ ಆರಂಭವಾಗಲಿರುವ ಗ್ರಾಹಕ ಡೆಲಿವರಿಗೆ ಅದಾಗಲೇ 15 ಸಾವಿರಕ್ಕಿಂತ ಹೆಚ್ಚಿನ ಬುಕಿಂಗ್‌ಗಳನ್ನು ಮಾಡಲಾಗಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ. ಅದರಲ್ಲೂ ಆಟೋಮ್ಯಾಟಿಕ್ ಡೀಸೆಲ್ ಅವತರಣಿಕೆಯ ವಾಹನಗಳಿಗೆ ಭಾರೀ ಬೇಡಿಕೆ ಇದೆ.
AX ಮತ್ತು LX ವರ್ಶನ್‌ಗಳಲ್ಲಿ ಸಿಗಲಿರುವ ಥಾರ್ SUVಗಳು ಆರು ಬಣ್ಣಗಳಲ್ಲಿ ಲಭ್ಯವಿರಲಿವೆ. ಪೆಟ್ರೋಲ್ ಹಾಗೂ ಡೀಸೆಲ್ ಇಂಜಿನ್‌ಗಳೆರಡರ ಆಯ್ಕೆಗಳೂ ಇವೆ.