ಸ್ಪೇನ್ನ ಈಶಾನ್ಯ ಮೆಡಿಟರೇನಿಯನ್ ತೀರದಲ್ಲಿರುವ ರೆಸ್ಟೋರೆಂಟ್ ಒಂದು, ಕೊರೊನಾ ವೈರಸ್ ಹಬ್ಬುವುದರಿಂದ ತನ್ನ ಗ್ರಾಹರಕನ್ನು ಸೇಫ್ ಆಗಿ ಇಡಲೆಂದು ಆವಿಷ್ಕಾರೀ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಫಂಕಿ ಪಿಜ್ಝಾ ಹೆಸರಿನ ಈ ರೆಸ್ಟೋರೆಂಟ್ ಇಲ್ಲಿನ ಕೋಸ್ಟಾ ಬ್ರಾವಾದ ಪಾಲಾಫ್ರುಗಲ್ನಲ್ಲಿದೆ. ಕಾಂಟಾಕ್ಟ್ ಲೆಸ್ ಆಗಿ ಐಟಮ್ಗಳನ್ನು ಆರ್ಡರ್ ಮಾಡಲೆಂದು ಇವರು ತಮ್ಮ ಫೋನ್ಗಳಲ್ಲಿ ‘Funky Pay’ ಕಿರು ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಈ ಕಿರು ತಂತ್ರಾಂಶದ ಮೂಲಕ ಮೆನು ನೋಡಿಕೊಂಡು, ಬೇಕಾದ ತಿಂಡಿಗಳನ್ನು ಆರ್ಡರ್ ಮಾಡಬಹುದಾಗಿದೆ. ಇದನ್ನು Virtual Waiter App ಎಂದು ಕರೆಯಲಾಗುವುದು.
ಆರ್ಡರ್ ಮಾಡಿದ ಖಾದ್ಯವನ್ನು ಅಡುಗೆಮನೆಯಲ್ಲಿ ತಯಾರಿಸುವುದರಿಂದ ಹಿಡಿದು ಅದು ಟೇಬಲ್ ಮೇಲೆ ಬರುವವರೆಗೂ ಟ್ರ್ಯಾಕ್ ಮಾಡುತ್ತಾ ಇರಲು ಕಿರು ತಂತ್ರಾಂಶದಲ್ಲಿ ವ್ಯವಸ್ಥೆ ಇದೆ.