ವಾಹನ ತಯಾರಿಕೆ ಹಾಗೂ ಮಾರಾಟ ಉದ್ಯಮದಲ್ಲಿ ಜನಮನ್ನಣೆ ಗಳಿಸಿಯೋ ಪಿಯಾಜಿಯೋ ಇದೀಗ ತನ್ನ ಗ್ರಾಹಕರಿಗೆ ಹಬ್ಬದ ಆಫರ್ ಕೊಡೋಕೆ ಮುಂದಾಗಿದೆ. ಅಪ್ರಿಲಿಯಾ ಹಾಗೂ ವೆಸ್ಪಾ ರೇಂಜ್ನ ಸ್ಕೂಟರ್ ಖರೀದಿದಾರರಿಗೆ 10,000 ರೂಪಾಯಿಯವರೆಗೆ ವಿಶೇಷ ಲಾಭವನ್ನ ನೀಡಲಿದೆ ಪಿಯಾಜಿಯೋ. ಈ ಮಾಡೆಲ್ನ ವಾಹನಗಳನ್ನ ನೀವು ಬುಕ್ ಮಾಡಿದ್ರೆ ನಿಮಗೆ 7,000 ಸಾವಿರ ರೂಪಾಯಿವರೆಗಿನ ವಿಮೆ, 4,000 ಮೌಲ್ಯದ ಉಚಿತ ಸಲಕರಣೆಗಳು ಹಾಗೂ 2,000 ರೂಪಾಯಿ ಮೌಲ್ಯದ ಬುಕ್ಕಿಂಗ್ ಬೆನಿಫಿಟ್ ನ್ನ ನೀವು ಪಡೆಯಬಹುದಾಗಿದೆ .
ಇದರ ಜೊತೆಯಲ್ಲಿ ಹೊಸ ಗ್ರಾಹಕರಿಗೆ ಒಂದು ವರ್ಷಗಳವರೆಗೆ ಗಾಡಿಯ ಫ್ರೀ ಸರ್ವೀಸ್ ಹಾಗೂ 5 ವರ್ಷಗಳವರೆಗೆ ವಾರಂಟಿ ಅವಧಿ ನೀಡಲು ಕಂಪನಿ ನಿರ್ಧರಿಸಿದೆ. ಈ ಆಫರ್ ನವೆಂಬರ್ 16, 2020ರ ವರೆಗೆ ಜಾರಿಯಲ್ಲಿ ಇರಲಿದೆ.
ಇನ್ನು ಹಬ್ಬದ ವಿಶೇಷ ಕೊಡುಗೆ ವಿಚಾರವಾಗಿ ಮಾತನಾಡಿದ ಕಂಪನಿ ಚೇರ್ಮನ್ ಹಾಗೂ ಎಂಡಿ, ನಮ್ಮ ಗ್ರಾಹಕರಿಗೆ ದಸರಾ ಹಾಗೂ ದೀಪಾವಳಿ ಹಬ್ಬದ ಸಂಭ್ರಮವನ್ನ ಹೆಚ್ಚಿಸುವ ಸಲುವಾಗಿ ಈ ವಿಶೇಷ ಆಫರ್ಗಳನ್ನ ನೀಡಿದ್ದೇವೆ. ವೆಸ್ಪಾ ಹಾಗೂ ಏಪ್ರಿಲಿಯಾ ಸ್ಕೂಟರ್ ಖರೀದಿದಾರರನ್ನ ಸಂತುಷ್ಠಗೊಳಿಸೋದೇ ನಮ್ಮ ಗುರಿ ಅಂತಾ ಹೇಳಿದ್ರು.
ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ಮೂಲದ ಒಟಿಒ ಕ್ಯಾಪಿಟಲ್ ಜೊತೆ ಸಹಭಾಗಿತ್ವ ಪಡೆದಿರುವ ಪಿಯಾಜಿಯೋ ಕಂಪನಿ ಈ ಮೂಲಕ ಗ್ರಾಹಕರಿಗೆ ಲೀಸ್ ಅಥವಾ ಗುತ್ತಿಗೆ ಆಧಾರದಲ್ಲಿ ಬೈಕ್ ಗಳನ್ನ ನೀಡಲಿದೆ. ಅಂದರೆ ಡೌನ್ ಪೇಮೆಂಟ್ ಮಾಡದೇ ನೀವು ಬೈಕ್ ಗಳನ್ನ ಮಾಸಿಕ ಇಎಂಐ ಪಾವತಿಸಿ ಪಡೆಯಬಹುದಾಗಿದೆ. ಈ ವಿಶೇಷ ಸೇವೆ ಪ್ರಾಥಮಿಕ ಹಂತವಾಗಿ ಬೆಂಗಳೂರು ಹಾಗೂ ಪುಣೆಯಲ್ಲಿ ಮಾತ್ರ ಜಾರಿಯಾಗಲಿದೆ.