ನವದೆಹಲಿ: ಕಾರ್ ಗಳಲ್ಲಿ ಸುರಕ್ಷತೆಗಾಗಿ ಏರ್ ಬ್ಯಾಗ್ ಅಳವಡಿಸುವಂತೆ ದ್ವಿಚಕ್ರ ವಾಹನಗಳಿಗೂ ಏರ್ ಬ್ಯಾಗ್ ವ್ಯವಸ್ಥೆಯನ್ನ ಅಳವಡಿಸಲಾಗುವುದು. ವಾಹನ ಸುರಕ್ಷತಾ ಸಾಧನಗಳ ತಯಾರಿಕಾ ಕಂಪನಿ ಆಟೋಲಿವ್ ನೊಂದಿಗೆ ಒಪ್ಪಂದ ಪಿಯಾಜ್ಜಿಯೋ ಒಪ್ಪಂದ ಮಾಡಿಕೊಂಡಿದ್ದು, ಸ್ಕೂಟರ್, ಮೋಟಾರ್ ಸೈಕಲ್ ಗಳಲ್ಲಿ ಸವಾರರ ಸುರಕ್ಷತೆಗಾಗಿ ಏರ್ ಬ್ಯಾಗ್ ಅಭಿವೃದ್ಧಿಪಡಿಸಲಾಗಿದೆ.
ತುರ್ತು ಸಂದರ್ಭದಲ್ಲಿ ಮಿಲಿ ಸೆಕೆಂಡ್ ಒಳಗೆ ಏರ್ ಬ್ಯಾಗ್ ಓಪನ್ ಆಗಿ ಸವಾರ ಮತ್ತು ಹಿಂಬದಿ ಸವಾರರಿಗೆ ರಕ್ಷಣೆ ಒದಗಿಸಲಿದೆ. ಹ್ಯಾಂಡಲ್ ಮೇಲ್ಭಾಗದಲ್ಲಿ ಏರ್ ಬ್ಯಾಗ್ ಅಳವಡಿಸಲಾಗುವುದು. ಈಗಾಗಲೇ ಪೂರ್ಣ ಪ್ರಮಾಣದ ಪರೀಕ್ಷೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಸವಾರರಿಗೆ ಸುರಕ್ಷತೆ ಒದಗಿಸಲು ಏರ್ ಬ್ಯಾಗ್ ಅಳವಡಿಸಲಾಗುವುದು ಎಂದು ಹೇಳಲಾಗಿದೆ.