alex Certify ಬದಲಾಗಲಿದೆ ಹೊಸ ಕಾರು ಖರೀದಿ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬದಲಾಗಲಿದೆ ಹೊಸ ಕಾರು ಖರೀದಿ ನಿಯಮ

ಹೊಸ ಕಾರು ಖರೀದಿಸಲು ಮುಂದಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಕಾರು ಖರೀದಿಸಿದ ನಂತರ ಅದರ ಪಾವತಿ ವಿಧಾನ ಬದಲಾಗಲಿದೆ.

ಮೋಟಾರು ವಿಮಾ ಸೇವಾ ಪೂರೈಕೆದಾರರ ಮಾರ್ಗಸೂಚಿಗಳನ್ನು ಪರಿಶೀಲಿಸುವ ಸಮಿತಿಯು ಕೆಲವು ಸಲಹೆಗಳನ್ನು ನೀಡಿದೆ. ಹೊಸ ಕಾರು ಖರೀದಿಸಿದ ನಂತ್ರ ಕಾರಿಗೆ ಹಣವನ್ನು ಒಂದು ಚೆಕ್ ನಲ್ಲಿ ಹಾಗೂ ವಿಮಾ ಪ್ರೀಮಿಯಂ ಹಣವನ್ನು ಇನ್ನೊಂದು ಚೆಕ್ ನಲ್ಲಿ ನೀಡಬೇಕು.

ವಿಮಾ ನಿಯಂತ್ರಕ ಐಆರ್ಡಿಎಐ 2017 ರಲ್ಲಿ ಎಂಐಎಸ್ಪಿ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಇದು ವಿತರಕರಿಂದ ವಾಹನಗಳ ವಿಮಾ ಮಾರಾಟವನ್ನು ಸುವ್ಯವಸ್ಥಿತಗೊಳಿಸುವ ಮತ್ತು ವಿಮಾ ಕಾಯ್ದೆ 1938 ರ ಅಡಿಯಲ್ಲಿ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ. ಜೂನ್ 2019 ರಲ್ಲಿ ಐಆರ್ಡಿಎಐ, ಎಂಐಎಸ್ಪಿಯ ಮಾರ್ಗಸೂಚಿಗಳನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಿತು. ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ, ಇದರಲ್ಲಿ ಎಂಐಎಸ್ಪಿ ಮೂಲಕ ಮೋಟಾರು ವಿಮಾ ವ್ಯವಹಾರಕ್ಕೆ ಸಂಬಂಧಿಸಿದ ಹಲವು ಪ್ರಸ್ತಾಪಗಳು ಸೇರಿದಂತೆ ಹಲವು ಸಲಹೆಗಳನ್ನು ನೀಡಿದೆ.

ಇತರ ಹಲವು ಸಮಸ್ಯೆಗಳ ಜೊತೆಗೆ ಮೋಟಾರು ವಿಮಾ ಪಾಲಿಸಿಯನ್ನು ನೀಡುವಾಗ ಗ್ರಾಹಕರಿಂದ ಪ್ರೀಮಿಯಂ ಪಾವತಿಗಳನ್ನು ಸಂಗ್ರಹಿಸುವ ಪ್ರಸ್ತುತ ವ್ಯವಸ್ಥೆಯನ್ನು ಸಹ ಸಮಿತಿ ಪರಿಶೀಲಿಸಿದೆ. ಅದರ ಮೇಲೆ ಗ್ರಾಹಕರು ಹೊಸ ಕಾರನ್ನು ಆಟೋಮೋಟಿವ್ ಮಾರಾಟಗಾರರಿಂದ ಖರೀದಿಸಿದಾಗ ಮತ್ತು ಸಂಪೂರ್ಣ ಹಣವನ್ನು ಒಂದು ಚೆಕ್ ಮೂಲಕ ಪಾವತಿಸಿದಾಗ ವಿಮಾ ಪ್ರೀಮಿಯಂನ ಬೆಲೆಯ ಬಗ್ಗೆ ಪಾರದರ್ಶಕತೆ ಕೊರತೆ ಎದುರಾಗುತ್ತದೆ ಎಂದು ಸಮಿತಿ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...