ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಯುಐಡಿಎಐ ಎಚ್ಚರಿಕೆ ನೀಡಿದೆ. ಆಧಾರ್ ಕಾರ್ಡ್ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಾರದು ಎಂದು ಯುಐಡಿಎಐ ಹೇಳಿದೆ.
ಆಧಾರ್ ಕಾರ್ಡ್ ನ ಮಾಹಿತಿಯನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಯುಐಡಿಎಐ ಆಧಾರ್ ಕಾರ್ಡ್ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ.
ವೈಯಕ್ತಿಕ ಸಂದೇಶದಲ್ಲಿ ಮಾಹಿತಿ ಹಂಚಿಕೊಳ್ಳಿ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳುವುದ್ರಿಂದ ನಷ್ಟವಾಗುವ ಸಾಧ್ಯತೆಯಿದೆ ಎಂದು ಯುಐಡಿಎಐ ಹೇಳಿದೆ.
ಯುಐಡಿಎಐ ಟ್ವೀಟರ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದೆ. ಹಾಗೆ ಆಧಾರ್ ಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಬದಲು ಮನೆಯಲ್ಲೇ ಕುಳಿತು ನಿಮ್ಮ ಅಪಾಯಿಂಟ್ಮೆಂಟ್ ಬುಕ್ ಮಾಡಬಹುದು. ಇದಕ್ಕಾಗಿ http//sappointments.uidai.gov.inbookappointment.aspx ಕ್ಲಿಕ್ ಮಾಡಬೇಕು. ಇದಕ್ಕಾಗಿ ಕ್ಯೂಆರ್ ಕೋಡ್ ಬಿಡುಗಡೆ ಮಾಡಲಾಗಿದೆ.
ಹಾಗೆ ಕೊರೊನಾ ಸಂದರ್ಭದಲ್ಲಿ ಜನರ ಕೆಲಸ ಸುಲಭ ಮಾಡಲು ಯುಐಡಿಎಐ ಜನರಿಗೆ ಸೌಲಭ್ಯ ನೀಡ್ತಿದೆ. mAadhaar ಅಪ್ಲಿಕೇಷನ್ ಮೂಲಕ ನಿಮ್ಮ ವಿಳಾಸ ಸೇರಿದಂತೆ ಹೆಸರು, ಹುಟ್ಟಿದ ದಿನಾಂಕವನ್ನು ಬದಲಿಸಬಹುದು.