90 ರ ದಶಕದ ಅಂತ್ಯ ಹಾಗೂ 2000 ದಶಕದ ಪ್ರಾರಂಭದಲ್ಲಿ ನೋಕಿಯಾ ಬೇಸಿಕ್ ಸೆಟ್ ಗಳು, ಪ್ರಮುಖವಾಗಿ 3310 ಸೆಟ್ ಗಳು ಮೊಬೈಲ್ ಜಗತ್ತನ್ನು ಆಳಿದ್ದವು.
ತಿಳಿ ನೀಲಿ ಕವಚ ಬಿಳಿಯ ಕೀ ಪ್ಯಾಡ್ ಹೊಂದಿರುವ ಗಟ್ಟಿಮುಟ್ಟಾದ ಆ ಸೆಟ್ ಗಳಿಗೀಗ 20 ವರ್ಷವಾಗಿದೆ. ನೋಕಿಯಾ ಫಿನ್ ಲ್ಯಾಂಡ್ ಮೂಲದ ಕಂಪನಿಯಾಗಿದ್ದು, ಅತಿ ಹೆಚ್ಚು ಬಾಳಿಕೆ ಬರುವ ಬ್ಯಾಟರಿ ಬ್ಯಾಕಪ್ ಹೊಂದಿದ ಫೋನ್ ಗಳನ್ನು ಕಂಪನಿ ತಯಾರಿಸುತ್ತದೆ.
ನೆಟ್ಟಿಗರು ತಾವು ಕೊಂಡಿದ್ದ ಮೊದಲ ನೋಕಿಯಾ ಫೋನ್ ನ ನೆನಪು ಮಾಡಿಕೊಂಡಿದ್ದಾರೆ. ಜಿಂಗಲ್ ನ ಕ್ಲಾಸಿಕ್ ರಿಂಗ್ ಟೋನ್, ಹಾವಿನ ಆಟ ಮುಂತಾದ ಫೋನ್ ನಲ್ಲಿದ್ದ ವಿಶೇಷತೆಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 3310 ಸೆಟ್ ನ್ನು ಶತಮಾನದ ಉತ್ತಮ ಮೊಬೈಲ್ ಎಂದು ಕೊಂಡಾಡಿದ್ದಾರೆ.