alex Certify ಫೇಸ್ಬುಕ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಆನ್ಲೈನ್ನಲ್ಲಿ ಹೆಸರು, ಫೋನ್ ನಂಬರ್, ಜನ್ಮದಿನಾಂಕ ಸೇರಿ ಖಾಸಗಿ ಮಾಹಿತಿ ಸೋರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್ಬುಕ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಆನ್ಲೈನ್ನಲ್ಲಿ ಹೆಸರು, ಫೋನ್ ನಂಬರ್, ಜನ್ಮದಿನಾಂಕ ಸೇರಿ ಖಾಸಗಿ ಮಾಹಿತಿ ಸೋರಿಕೆ

ನವದೆಹಲಿ: ಬಹುದೊಡ್ಡ ಪ್ರಮಾಣದಲ್ಲಿ ಡೇಟಾ ಸೋರಿಕೆಯಾಗಿದೆ. 500 ದಶಲಕ್ಷ ಕ್ಕೂ ಹೆಚ್ಚು ಫೇಸ್ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹ್ಯಾಕಿಂಗ್ ಫೋರಮ್ ನಲ್ಲಿ ಪ್ರಕಟಿಸಲಾಗಿದೆ.

ಹೀಗೆ ಸೋರಿಕೆಯಾದ ಡೇಟಾದಲ್ಲಿ ಫೋನ್ ಸಂಖ್ಯೆಗಳು, ಪೂರ್ಣ ಹೆಸರುಗಳು, ಅವರ ಸ್ಥಳ, ಇಮೇಲ್ ವಿಳಾಸ, ಜನ್ಮದಿನಾಂಕ ಮೊದಲ ಖಾಸಗಿ ಮಾಹಿತಿ ಪ್ರಕಟಿಸಲಾಗಿದೆ. ನೂರಾರು ದೇಶಗಳಿಂದ ಡೇಟಾ ಸೋರಿಕೆಯಾಗಿ 533 ಮಿಲಿಯನ್ ಗಿಂತಲೂ ಹೆಚ್ಚು ಫೇಸ್ಬುಕ್ ಖಾತೆಗಳ ಮಾಹಿತಿ ಬಹಿರಂಗಪಡಿಸಲಾಗಿದೆ.

ಭಾರತದಲ್ಲಿ 6 ದಶಲಕ್ಷ ಕ್ಕೂ ಹೆಚ್ಚು ಬಳಕೆದಾರರ ಮಾಹಿತಿ ಸೋರಿಕೆ ಆಗಿದೆ. ಅಮೆರಿಕದಲ್ಲಿ 32 ಮಿಲಿಯನ್ ಮತ್ತು ಯುಕೆಯಲ್ಲಿ 11 ಮಿಲಿಯನ್ ಬಳಕೆದಾರರ ದಾಖಲೆ ವಿವರ ಬಹಿರಂಗವಾಗಿವೆ. ಸೋರಿಕೆಯಾದ ಡೇಟಾವನ್ನು ವಂಚನೆಗೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಭದ್ರತಾ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲಿ ಸೈಬರ್ ಕ್ರೈಮ್ ಗುಪ್ತಚರ ಸಂಸ್ಥೆಯ ಸಹ-ಸಂಸ್ಥಾಪಕ ಅಲೋನ್ ಗಾಲ್ ಅವರ ಪ್ರಕಾರ, ಡೇಟಾಬೇಸ್ ಜನವರಿಯಿಂದ ಹ್ಯಾಕರ್ ವಲಯದಲ್ಲಿ ಪ್ರಸಾರವಾಗುತ್ತಿದೆ. ಫೇಸ್ ಬುಕ್ ಗೆ  ಜೋಡಣೆಯಾದ ದೂರವಾಣಿ ಸಂಖ್ಯೆಗಳನ್ನು ಕದಿಯಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...