ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಪ್ರಕಾರ 2.5 ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತದ ಪಿಎಫ್ ದೇಣಿಗೆಗೆ ತೆರಿಗೆ ಅನ್ವಯವಾಗುತ್ತದೆ.
ಉದ್ಯೋಗಿಗಳ ಭವಿಷ್ಯನಿಧಿಗೆ ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಕೊಡುಗೆ ಸಲ್ಲಿಸುವವರಿಗೆ ಅವರು ಗಳಿಸುವ ಬಡ್ಡಿಯ ಮೇಲೆ ತೆರಿಗೆ ವಿಧಿಸಲಾಗುವುದು. ಬಜೆಟ್ ಮಾಹಿತಿ ಪ್ರಕಾರ, ಈ ನಿಯಮ ಪಿಪಿಎಫ್, ವಿಪಿಎಫ್ ಗೆ ಕೂಡ ಅನ್ವಯವಾಗಲಿದ್ದು, ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.
ಅಂದ ಹಾಗೆ, ಪಿಪಿಎಫ್ ನಲ್ಲಿ ವಾರ್ಷಿಕ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಮಾತ್ರ ಹೂಡಿಕೆ ಮಾಡಬಹುದಾಗಿರುವುದರಿಂದ 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಕಾಂಟ್ರಿಬ್ಯೂಷನ್ ಕುರಿತ ಬಡ್ಡಿದರ ನಿಯಮ ಇದಕ್ಕೆ ಅನ್ವಯವಾಗುವುದಿಲ್ಲ ಎನ್ನಲಾಗಿದೆ.
ಇಪಿಎಫ್ ವಾರ್ಷಿಕ ಕೊಡುಗೆ ಮಿತಿ 3 ಲಕ್ಷ ರೂಪಾಯಿಗಳಾಗಿದ್ದು, ಹೆಚ್ಚುವರಿ 50 ಸಾವಿರ ರೂಪಾಯಿಗೆ ಮಾತ್ರ ಬಡ್ಡಿಗೆ ಮಾತ್ರ ತೆರಿಗೆ ಪಾವತಿಸಬೇಕಾಗುತ್ತದೆ. ಐಟಿ ಸೇರಿ ಕೆಲವು ವಲಯದಲ್ಲಿ ಹೆಚ್ಚಿನ ವೇತನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸರ್ಕಾರಕ್ಕೆ ಬಡ್ಡಿ ಸಲ್ಲಿಕೆ ಮತ್ತು ಆದಾಯ ಹೆಚ್ಚಾಗಲಿದೆ. ಇಪಿಎಫ್ ಬಡ್ಡಿದರ ಕಡಿಮೆ ಮಾಡಿದ ಸಂದರ್ಭದಲ್ಲಿ ಕಡಿಮೆ ವೇತನ ಪಡೆಯುವವರ ಇಪಿಎಫ್ ಮೂಲದ ಆದಾಯ ಇಳಿಕೆಯಾಗುತ್ತದೆ. ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಇಪಿಎಫ್ ಕಾಂಟ್ರಿಬ್ಯೂಷನ್ ನೀಡುವವರಿಗೆ ಮಾತ್ರ ಬಡ್ಡಿ ಆದಾಯವನ್ನು ತೆರಿಗೆಗೆ ಅರ್ಹವೆಂದು ಪರಿಗಣಿಸಬಹುದಾಗಿದೆ.