ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಪ್ರಕಾರ 2.5 ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತದ ಪಿಎಫ್ ದೇಣಿಗೆಗೆ ತೆರಿಗೆ ಅನ್ವಯವಾಗುತ್ತದೆ.
ಉದ್ಯೋಗಿಗಳ ಭವಿಷ್ಯ ನಿಧಿಗೆ ವಾರ್ಷಿಕ 2.5 ಲಕ್ಷ ರೂ. ಗಿಂತ ಹೆಚ್ಚಿನ ಕೊಡುಗೆ ಸಲ್ಲಿಸುವವರಿಗೆ ಅವರು ಗಳಿಸುವ ಬಡ್ಡಿಯ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಅತಿ ಹೆಚ್ಚು ಮೊತ್ತದ ಪಿಎಫ್ ವಂತಿಗೆ ಪಾವತಿಸುವ ನೌಕರರಿಗೆ ಮಾತ್ರ ಇದು ಅನ್ವಯವಾಗುತ್ತದೆ.
ಪಿಪಿಎಫ್ ನಲ್ಲಿ 4.5 ಕೋಟಿಗೂ ಹೆಚ್ಚು ಚಂದಾದಾರರು ಇದ್ದಾರೆ. ಇವರಲ್ಲಿ 1.23 ಲಕ್ಷದಷ್ಟು ನೌಕರರಿದ್ದು, ಇವರ ವಾರ್ಷಿಕ ವಂತಿಗೆ ಪ್ರಮಾಣ 62,500 ಕೋಟಿ ರೂಪಾಯಿ ಆಗುತ್ತದೆ. ಶೇಕಡ 99 ರಷ್ಟು ಇಪಿಎಫ್ ಚಂದಾದಾರರು ಪಿಎಫ್ ಬಡ್ಡಿ ತೆರಿಗೆ ವ್ಯಾಪ್ತಿಯಿಂದ ಹೊರಗಿದ್ದಾರೆ ಎಂದು ಹೇಳಲಾಗಿದೆ.