ನವದೆಹಲಿ: ಭವಿಷ್ಯ ನಿಧಿಯ ಹೊಸ ತೆರಿಗೆ ನಿಯಮ ಜಾರಿಯಾಗಿದೆ. ಇಪಿಎಫ್ ಖಾತೆಗೆ ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಜಮಾ ಆದರೆ ತೆರಿಗೆ ಅನ್ವಯವಾಗಲಿದೆ.
ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಭವಿಷ್ಯ ನಿಧಿಗೆ ಸಂಬಂಧಿಸಿದ ತೆರಿಗೆ ನಿಯಮಾವಳಿಗಳನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಅನ್ವಯ ಭವಿಷ್ಯನಿಧಿ ಆದಾಯದ ಮೇಲೆ ಆದಾಯ ತೆರಿಗೆ ವಿಧಿಸಬಹುದಾಗಿದೆ.
ವಾರ್ಷಿಕ 2.5 ಲಕ್ಷ ರೂಪಾಯಿಗಿಂತಲೂ ಹೆಚ್ಚು ಹಣ ಭವಿಷ್ಯನಿಧಿ ಖಾತೆಗೆ ಜಮಾ ಆದರೆ ಮಾತ್ರ ತೆರಿಗೆ ಅನ್ವಯವಾಗುತ್ತದೆ. ವಾರ್ಷಿಕ 21 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೂಲವೇತನದ ಉದ್ಯೋಗಿಗಳಿಗೆ ತೆರಿಗೆ ಕಡಿತವಾಗುತ್ತದೆ.
ಪಿಎಫ್ ಖಾತೆಯಲ್ಲಿ ತೆರಿಗೆ ಲೆಕ್ಕಾಚಾರ ಹಾಕಲು ಎರಡು ಪ್ರತ್ಯೇಕ ಖಾತೆ ನಿರ್ವಹಿಸಬೇಕಿದೆ. ತೆರಿಗೆಗೆ ಒಳಪಡುವ ಮತ್ತು ತೆರಿಗೆ ಮುಕ್ತವಾದ ದೇಣಿಗೆಯ ಲೆಕ್ಕಾಚಾರಕ್ಕೆ ಇದರಿಂದ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ