ನವದೆಹಲಿ: ಭವಿಷ್ಯನಿಧಿ ನೌಕರರ ಖಾತೆಗೆ ಶೀಘ್ರವೇ ಬಡ್ಡಿ ಹಣ ಜಮಾ ಮಾಡಲಾಗುವುದು. 2019 -20ನೇ ಬಡ್ಡಿಹಣ ಪಿಎಫ್ ಖಾತೆಗೆ ಶೀಘ್ರವೇ ಜಮಾ ಮಾಡಲು ಕ್ರಮಕೈಗೊಳ್ಳಲಾಗಿದೆ.
2019 -20 ನೇ ಸಾಲಿನಲ್ಲಿ ಶೇಕಡ 8.5 ರಷ್ಟು ಬಡ್ಡಿ ನೀಡಲು ಇಪಿಎಫ್ಒ ನಿರ್ಧರಿಸಿತ್ತು. ಎರಡು ಕಂತುಗಳಲ್ಲಿ ಈ ಹಣವನ್ನು ಜಮಾ ಮಾಡಲಾಗುವುದು. ಶೇಕಡ 8.15 ರಷ್ಟು ಮತ್ತು ಶೇಕಡಾ 0.35 ರಷ್ಟು ಬಡ್ಡಿಯನ್ನು ಎರಡು ಕಂತುಗಳಲ್ಲಿ ಪಿಎಫ್ ಖಾತೆಗಳಿಗೆ ಜಮಾ ಮಾಡಲಾಗುವುದು.
ಇಪಿಎಫ್ಒ ಕೇಂದ್ರ ಮಂಡಳಿಯ ಸದಸ್ಯ ಪ್ರಭಾಕರ ಬನುಶೆರ್ ಅವರು, ಭವಿಷ್ಯನಿಧಿ ಖಾತೆದಾರರಿಗೆ ಎರಡು ಕಂತುಗಳಲ್ಲಿ ಬಡ್ಡಿ ಹಣ ಪಿಎಫ್ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.