ಪಿಎಫ್ ಚಂದಾದಾರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ದೀಪಾವಳಿ ವೇಳೆಗೆ ಪಿಎಫ್ ಬಡ್ಡಿ ಗ್ರಾಹಕರ ಖಾತೆ ಸೇರಲಿದೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ. ಶೇಕಡಾ 8.15ರಷ್ಟು ಬಡ್ಡಿ ಮೊದಲ ಕಂತಿನ ರೂಪದಲ್ಲಿ ಖಾತೆ ಸೇರಲಿದೆ.
ನೌಕರರ ಭವಿಷ್ಯ ನಿಧಿಗೆ ಶೇಕಡಾ 8.5ರಷ್ಟು ಬಡ್ಡಿಯನ್ನು 2019-2020ರಲ್ಲಿ ಎರಡು ಕಂತಿನಲ್ಲಿ ನೀಡುವುದಾಗಿ ಸೆಪ್ಟೆಂಬರ್ ನಲ್ಲಿಯೇ ಇಪಿಎಫ್ ಒ ಹೇಳಿತ್ತು. ಮೊದಲ ಕಂತಿನಲ್ಲಿ ಶೇಕಡಾ 8.12ರಷ್ಟು ಬಡ್ಡಿಯನ್ನು ನೀಡಲಿದೆ. ಎರಡನೇ ಕಂತಿನ ರೂಪದಲ್ಲಿ ಶೇಕಡಾ 0.3ರಷ್ಟು ಬಡ್ಡಿ ಈ ವರ್ಷ ಡಿಸೆಂಬರ್ ನಲ್ಲಿ ಖಾತೆ ಸೇರಲಿದೆ.
ಇಪಿಎಫ್‌ಒನ ಉನ್ನತ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಡಿಸೆಂಬರ್‌ನಲ್ಲಿ ಮತ್ತೆ ಸಭೆ ಸೇರಲಿದೆ. ಉಳಿದ ಶೇಕಡಾ 0.35 ಬಡ್ಡಿಯನ್ನು ಚಂದಾದಾರರ ಖಾತೆಗೆ ಜಮಾ ಮಾಡುವ ಬಗ್ಗೆ ಸಿಬಿಟಿ ನಿರ್ಧಾರ ತೆಗೆದುಕೊಳ್ಳುತ್ತದೆ. ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನೇತೃತ್ವದ ಮಂಡಳಿಯು ಈ ವರ್ಷದ ಮಾರ್ಚ್‌ನಲ್ಲಿ ಸಭೆ ನಡೆಸಿ 2019-20ರಲ್ಲಿ ಶೇಕಡಾ 8.5 ರಷ್ಟು ಬಡ್ಡಿದರ ನೀಡಲು ನಿರ್ಧರಿಸಿತ್ತು.
ಕೊರೊನಾ ಹಿನ್ನಲೆಯಲ್ಲಿ ಉದ್ಯೋಗಿಗಳ ಸಮಸ್ಯೆಗೆ ಸ್ಪಂದಿಸಿದ ಸರ್ಕಾರ ಇಪಿಎಫ್‌ಒ ತಿದ್ದುಪಡಿ ಮಾಡಿ ಪಿಎಫ್ ನ ಭಾಗಶಃ ಹಣವನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ.