‘ಉಜ್ವಲಾ’ ಯೋಜನೆಯಡಿ ಉಚಿತ ಎಲ್ಪಿಜಿ ಸಂಪರ್ಕ ಪಡೆಯುವ ಯೋಚನೆಯಲ್ಲಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಉಜ್ವಲಾ ಯೋಜನೆಯಡಿ ಲಭ್ಯವಿರುವ ಸಬ್ಸಿಡಿ ನಿಯಮದಲ್ಲಿ ಸರ್ಕಾರ ಬದಲಾವಣೆ ಮಾಡ್ತಿದೆ. ಪೆಟ್ರೋಲಿಯಂ ಸಚಿವಾಲಯ 2 ಹೊಸ ಬದಲಾವಣೆ ಬಗ್ಗೆ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ಜಾರಿಗೆ ತರುವ ಸಾಧ್ಯತೆಯಿದೆ. ಸರ್ಕಾರ, ಒಎಂಸಿಗಳ ಮುಂಗಡ ಪಾವತಿ ಮಾದರಿಯನ್ನು ಬದಲಾಯಿಸುವ ಸಾಧ್ಯತೆಯಿದೆ.
ಪ್ರಸ್ತುತ ಒಎಂಸಿ,ಮುಂಗಡ ಹಣವನ್ನು ಇಎಂಐ ರೂಪದಲ್ಲಿ ಪಡೆಯುತ್ತದೆ. ಆದ್ರೆ ಇನ್ಮುಂದೆ ಇದನ್ನು ಒಂದೇ ಬಾರಿ ವಸೂಲಿ ಮಾಡುವ ಸಾಧ್ಯತೆಯಿದೆ. ಉಳಿದ 1600 ರೂಪಾಯಿ ಸಬ್ಸಿಡಿಯನ್ನು ಸರ್ಕಾರ ನೀಡಲಿದೆ. ಸರ್ಕಾರದ ಯೋಜನೆಯಲ್ಲಿ ಗ್ರಾಹಕರಿಗೆ 14.2 ಕೆಜಿ ಸಿಲಿಂಡರ್ ಮತ್ತು ಸ್ಟೌವ್ ನೀಡಲಾಗುತ್ತದೆ. ಇದರ ಬೆಲೆ ಸುಮಾರು 3200 ರೂಪಾಯಿ. ಸರ್ಕಾರದ ಪರವಾಗಿ 1600 ರೂಪಾಯಿಗಳ ಸಬ್ಸಿಡಿ ಸಿಗುತ್ತದೆ. ಒಎಂಸಿಗಳು 1600 ರೂಪಾಯಿ ನೀಡುತ್ತವೆ. ಒಎಂಸಿ ಈ ಮೊತ್ತವನ್ನು ಇಎಂಐ ರೂಪದಲ್ಲಿ ಪಡೆಯತ್ತದೆ.
ಉಜ್ವಲಾ ಯೋಜನೆಯಲ್ಲಿ ಹೆಸರು ನೋಂದಾಯಿಸುವುದು ತುಂಬಾ ಸುಲಭ. ಉಜ್ವಲಾ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆ ಗ್ಯಾಸ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್ pmujjwalayojana.com ಗೆ ಹೋಗಿ ವಿವರವಾಗಿ ಮಾಹಿತಿಯನ್ನು ಪಡೆಯಬಹುದು.