ಪೆಟ್ರೋಲ್, ಡೀಸೆಲ್ ದರಗಳು ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಲು ಕೇವಲ 3 ಪೈಸೆ ಮಾತ್ರ ಬಾಕಿ ಇದೆ.
ದಿನೇ ದಿನೇ ತೈಲ ದರ ಏರಿಕೆಯಾಗುತ್ತಲೇ ಇದ್ದು, 29 ದಿನಗಳ ವಿರಾಮದ ನಂತರ ತೈಲ ಕಂಪನಿಗಳು ಪರಿಷ್ಕೃತ ದರ ಜಾರಿಗೊಳಿಸಿವೆ.
ತೈಲ ಮಾರುಕಟ್ಟೆ ಸಂಸ್ಥೆಗಳ ಅಧಿಸೂಚನೆ ಪ್ರಕಾರ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಪೈಸೆ ಹಾಗೂ ಡೀಸೆಲ್ ಗೆ 25 ಪೈಸೆ ಹೆಚ್ಚಳವಾಗಿದೆ.
ಇದರಿಂದ ದಿಲ್ಲಿಯಲ್ಲಿ 83.71 ರೂ. ಇದ್ದ ಲೀಟರ್ ಪೆಟ್ರೊಲ್ ದರವೀಗ 84.97 ರೂ. ಆಗಿದೆ. ಮುಂಬೈನಲ್ಲಿ 73.87 ರೂ. ಇದ್ದ ಡೀಸೆಲ್ ಬೆಲೆಯೀಗ 74.12 ರೂ. ಗೆ ಏರಿಕೆಯಾಗಿದೆ.
2018 ರ ಅಕ್ಟೋಬರ್ 4 ರಂದು ಪೆಟ್ರೋಲ್ ದರವು ಪ್ರತಿ ಲೀಟರ್ ಗೆ 84 ರೂ. ಆಗಿತ್ತು. ಪ್ರಸ್ತುತ 83.97 ರೂ. ಆಗಿದ್ದು, ಹಿಂದಿನ ದಾಖಲೆ ಮುರಿಯಲು 3 ಪೈಸೆ ಬಾಕಿ ಇದೆಯಷ್ಟೆ. ಇದೇ ಸಂದರ್ಭದಲ್ಲಿ ಡೀಸೆಲ್ ಬೆಲೆ 75.45 ರೂ. ಇತ್ತು. ಆಗ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು 1.50 ರೂ. ಕಡಿಮೆ ಮಾಡಿತ್ತು. ರಾಜ್ಯ ಸರ್ಕಾರಗಳೂ ತನ್ನ ಪಾಲಿನ ತೆರಿಗೆಯಲ್ಲಿ 1 ರೂ. ಕಡಿತ ಮಾಡಿದ್ದರಿಂದ ಗ್ರಾಹಕರು ಕೊಂಚ ನಿಟ್ಟುಸಿರು ಬಿಡುವಂತಾಗಿತ್ತು.