ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಲೀಟರ್ ಗೆ 25 ಪೈಸೆ ಹೆಚ್ಚಳ ಮಾಡಿದ ಪರಿಣಾಮ ಸೋಮವಾರ ರಾಷ್ಟ್ರರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿಯ ಪ್ರಕಾರ, ಪೆಟ್ರೋಲ್ ಬೆಲೆ ಲೀಟರ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿದ್ದು, 84.70 ರೂ.ನಿಂದ 84.95 ರೂ. ತಲುಪಿದೆ. ಡೀಸೆಲ್ ಬೆಲೆ ಲೀಟರ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿದ್ದು 74.88 ರೂ.ನಿಂದ 75.13 ರೂಪಾಯಿ ತಲುಪಿದೆ. ಮುಂಬೈನಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 91.6 ರೂಪಾಯಿಗೆ ಏರಿಕೆಯಾಗಿದ್ದು, ದಾಖಲೆಯ ಗರಿಷ್ಠ ಮಟ್ಟ ತಲುಪಿದೆ.
ದೆಹಲಿಯಲ್ಲಿ ಪೆಟ್ರೋಲ್ 84.95 ರೂ., ಡೀಸೆಲ್ 75.13 ರೂ., ಇದೆ. ಮುಂಬೈನಲ್ಲಿ ಪೆಟ್ರೋಲ್ 91.56 ರೂ., ಡೀಸೆಲ್ 81.87 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ 87.63 ರೂ., ಡೀಸೆಲ್ 80.43 ರೂ. ಇದೆ. ಕೊಲ್ಕೊತ್ತಾದಲ್ಲಿ ಪೆಟ್ರೋಲ್ 86.39 ರೂ., ಡೀಸೆಲ್ 78.72 ರೂ. ಇದೆ.