ನವದೆಹಲಿ: 7 ದಿನಗಳಲ್ಲಿ ಆರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗಿವೆ. ತೈಲ ಮಾರುಕಟ್ಟೆ ಕಂಪನಿಗಳ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಬೆಲೆ ಲೀಟರ್‌ಗೆ 30 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 35 ಪೈಸೆಯಷ್ಟು ಏರಿಕೆಯಾಗಿದೆ.
ಸೋಮವಾರ, ಮಾರ್ಚ್ 28 ರಂದು ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 99.41 ರೂ., ಡೀಸೆಲ್ ಪ್ರತಿ ಲೀಟರ್ ಗೆ 90.77 ರೂ. ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್ ಗೆ 114.08 ರೂ., ಡೀಸೆಲ್ ಲೀಟರ್‌ಗೆ 98.48 ರೂ.ಗೆ ಮಾರಾಟವಾಗಲಿದೆ.
7 ದಿನಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ ಗೆ ಸುಮಾರು 4.10 ರೂ. ಹೆಚ್ಚಿಸಿವೆ.
ಈ ವಾರದ ಆರಂಭದಲ್ಲಿ ಮಂಗಳವಾರ ಮತ್ತು ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 80 ಪೈಸೆ ಏರಿಕೆಯಾಗಿತ್ತು. ಇದಲ್ಲದೆ, ಶುಕ್ರವಾರ, ಶನಿವಾರ ಮತ್ತು ಭಾನುವಾರ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ದರವನ್ನು ಕ್ರಮವಾಗಿ 80 ಪೈಸೆ, 80 ಪೈಸೆ ಮತ್ತು 50 ಪೈಸೆ ಹೆಚ್ಚಿಸಿವೆ. ಅದೇ ರೀತಿ ಡೀಸೆಲ್ ದರವನ್ನು 80 ಪೈಸೆ, 80 ಪೈಸೆ ಮತ್ತು 55 ಪೈಸೆ ಹೆಚ್ಚಿಸಲಾಗಿದೆ.