ನವದೆಹಲಿ: ದೇಶಿಯ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಗುರುವಾರ ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್ಗೆ 10 ಪೈಸೆಯಷ್ಟು ಹೆಚ್ಚಳವಾಗಿ 81.83 ರೂ.ಗೆ ತಲುಪಿದೆ.
ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 81.73 ರೂಪಾಯಿಯಿಂದ 81.83 ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 73.56 ರೂಪಾಯಿ ಇದೆ. ಆಗಸ್ಟ್ 27 ರಂದು ಬೆಳಿಗ್ಗೆ 6 ಗಂಟೆಯಿಂದಲೇ ಪರಿಷ್ಕೃತ ದರಗಳು ಜಾರಿಯಲ್ಲಿರುತ್ತದೆ ಎಂದು ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ ತಿಳಿಸಿದೆ.
ಮುಂಬೈನಲ್ಲಿ ಪೆಟ್ರೋಲ್ 88.48 ರೂ., ಡೀಸೆಲ್ 80.11 ರೂ., ಕೊಲ್ಕೊತ್ತಾ ಪೆಟ್ರೋಲ್ 83.33 ರೂ., ಡೀಸೆಲ್ 77.06 ರೂ., ಚೆನ್ನೈನಲ್ಲಿ ಪೆಟ್ರೋಲ್ 84.82 ರೂ., ಡೀಸೆಲ್ 78.86 ರೂ. ದರ ಇದೆ.
ಕಚ್ಚಾತೈಲದ ಬೆಲೆ, ವಿದೇಶಿ ವಿನಿಮಯ ದರ ಮತ್ತು ಸ್ಥಳೀಯ ತೆರಿಗೆಗಳಿಂದ ದೇಶದ ವಿವಿಧ ಭಾಗಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ.