![](https://kannadadunia.com/wp-content/uploads/2019/10/fuel.jpg)
ನವದೆಹಲಿ: ಲಾಕ್ಡೌನ್ ಸಡಿಲಿಕೆ ನಂತರ ತೈಲ ಬೆಲೆ ದೈನಂದಿನ ದರ ಪರಿಷ್ಕರಣೆಯಾಗಿ ಕಳೆದ 11 ದಿನಗಳಿಂದ ಸತತವಾಗಿ ತೈಲದ ಬೆಲೆ ಏರಿಕೆಯಾಗಿದೆ.
11 ದಿನದ ಅವಧಿಯಲ್ಲಿ ಪೆಟ್ರೋಲ್ ಲೀಟರ್ ಗೆ 6.02 ರೂಪಾಯಿ ಹಾಗೂ ಡೀಸೆಲ್ ಲೀಟರ್ಗೆ 6.49 ರೂಪಾಯಿ ಹೆಚ್ಚಳವಾಗಿದೆ. ಇವತ್ತು ಪೆಟ್ರೋಲ್ 55 ಪೈಸೆ ಮತ್ತು ಡೀಸೆಲ್ 69 ಪೈಸೆ ಹೆಚ್ಚಳವಾಗಿದೆ.
ಕೊರೊನಾ ಸಾಂಕ್ರಾಮಿಕ ರೋಗ ಬಿಕ್ಕಟ್ಟಿನ ನಡುವೆ ತೈಲಕಂಪನಿಗಳು ದೈನಂದಿನ ದರ ಪರಿಷ್ಕರಣೆ ಆರಂಭಿಸಿದ ನಂತರ ಸತತ 11 ನೇ ದಿನ ತೈಲ ದರ ಏರಿಕೆಯಾಗಿದೆ.