ನವದೆಹಲಿ: ಕಚ್ಚಾ ತೈಲ ದರ 8 ವರ್ಷದ ಗರಿಷ್ಟ ಮಟ್ಟಕ್ಕೆ ತಲುಪಿದೆ. ಪೆಟ್ರೋಲ್ ಬೆಲೆ ಮತ್ತಷ್ಟು ದುಬಾರಿಯಾಗಲಿದೆ. 2014ರ ನಂತರ ಕಚ್ಚಾತೈಲ ದರ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಜಾಗತಿಕ ಮಟ್ಟದ ಬೆಳವಣಿಗೆಗಳ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ ಗೆ 90 ಡಾಲರ್ ಗೆ ತಲುಪಿದೆ. ಇದು 8 ವರ್ಷದ ಗರಿಷ್ಠ ದರ ಆಗಿದ್ದು, ದೇಶದಲ್ಲಿ ಈಗಾಗಲೇ 100 ರೂಪಾಯಿ ಗಡಿ ದಾಟಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಆದರೆ, ಸದ್ಯಕ್ಕೆ 5 ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಸದ್ಯಕ್ಕೆ ದರ ಏರಿಕೆ ಮಾಡುವ ಸಾಧ್ಯತೆ ಕಡಿಮೆ ಇದೆ. ಚುನಾವಣೆ ಮುಗಿದ ಕೂಡಲೇ ವಾಹನ ಸವಾರರಿಗೆ ಬರೆ ಬೀಳಲಿದೆ ಎಂದು ಹೇಳಲಾಗಿದೆ.