
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಹೆಚ್ಚಳವಾಗಿದೆ. ಒಂದು ಲೀಟರ್ ಪೆಟ್ರೋಲ್ ದರ 25 ಪೈಸೆ ಹಾಗೂ ಡೀಸೆಲ್ ದರ 30 ಪೈಸೆಯಷ್ಟು ಜಾಸ್ತಿಯಾಗಿದೆ. ನಾಲ್ಕು ದಿನದಲ್ಲಿ ಡೀಸೆಲ್ 1.22 ರೂ. ಹಾಗೂ ಪೆಟ್ರೋಲ್ 94 ಪೈಸೆ ಹೆಚ್ಚಳವಾಗಿದೆ
ಅನೇಕ ರಾಜ್ಯಗಳಲ್ಲಿ ಡೀಸೆಲ್ ದರ 100 ರೂಪಾಯಿ ಗಡಿದಾಟಿದೆ. ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶದಲ್ಲಿ ಡೀಸೆಲ್ ದರ 100 ರೂಪಾಯಿ ಗಡಿದಾಟಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 102.14 ರೂ., ಡೀಸೆಲ್ 90.48 ರೂಪಾಯಿ ಇದೆ.
ಮುಂಬೈನಲ್ಲಿ ಪೆಟ್ರೋಲ್ ದರ 108.15 ರೂ., ಡೀಸೆಲ್ 98.12 ರೂ. ಇದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ 105.6 ರೂ., ಡೀಸೆಲ್ ದರ 95.98 ರೂ. ಇದೆ.
ಪೆಟ್ರೋಲ್ ಮತ್ತು ಡೀಸೆಲ್ ದರ ದಿನೇ ದಿನೇ ಏರಿಕೆಯಾಗಿ ಶತಕದ ಗಡಿ ದಾಟಿ ಮುನ್ನುಗ್ಗುತ್ತಿದ್ದು, ಮೊದಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.