ನವದೆಹಲಿ: ರಾಜಸ್ಥಾನದಲ್ಲಿ ಒಂದು ಲೀಟರ್ ಪೆಟ್ರೋಲ್ 100.13 ರೂ.ಗೆ ಏರಿಕೆಯಾಗಿದ್ದು, ಇದು ದೇಶದಲ್ಲಿ ಗರಿಷ್ಠ ದಾಖಲೆಯಾಗಿದೆ. ಬೇರೆ ನಗರಗಳಲ್ಲಿಯೂ ಪೆಟ್ರೋಲ್ ದರ 100 ರೂಪಾಯಿ ಸಮೀಪದಲ್ಲಿದೆ.
ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ರಾಂಡೆಡ್ ಪೆಟ್ರೋಲ್ ದರ ಕೆಲದಿನಗಳ ಹಿಂದೆ 100 ರೂ. ದಾಟಿತ್ತು.
ಪೆಟ್ರೋಲ್ ಗೆ ಮೂಲ ದರಕ್ಕಿಂತ ತೆರಿಗೆಯೇ ಭಾರೀ ಹೆಚ್ಚಾಗಿದೆ. ಪೆಟ್ರೋಲ್ ಒಂದು ಲೀಟರ್ ಮೂಲ ದರ 31 ರೂಪಾಯಿ ಇದ್ದು, ಕೇಂದ್ರದ ತೆರಿಗೆ 32 ರೂಪಾಯಿ, ರಾಜ್ಯದ ತೆರಿಗೆ 25 ರೂಪಾಯಿ, ಡೀಲರ್ ಶುಲ್ಕ ಮತ್ತು ಸೆಸ್ 4 ರೂಪಾಯಿ ಇದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ ಗೆ 64 ಡಾಲರ್ ಗೆ ಏರಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೂಲ ದರಕ್ಕಿಂತ ದುಪ್ಪಟ್ಟು ತೆರಿಗೆಯನ್ನು ವಿಧಿಸಿವೆ. ವಿದೇಶಗಳ ಮೇಲೆ ಹೆಚ್ಚಿನ ಅವಲಂಬನೆ ಹಾಗೂ ಬೇಡಿಕೆ ಹೆಚ್ಚಾದ ಕಾರಣ ಪೆಟ್ರೋಲ್ ದರ ದುಬಾರಿಯಾಗಿದೆ ಎಂದು ಹೇಳಲಾಗಿದೆ.