ನವದೆಹಲಿ: ಒಂದು ದಿನದ ವಿರಾಮದ ನಂತರ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಣೆ ಮಾಡಿದೆ.
ಒಂದು ತಿಂಗಳಲ್ಲಿ ಬರೋಬ್ಬರಿ 18 ಸಲ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ಅನೇಕ ಮಹಾನಗರಗಳಲ್ಲಿ ಈಗಾಗಲೇ ಒಂದು ಲೀಟರ್ ಪೆಟ್ರೋಲ್ ದರ 100 ರೂಪಾಯಿ ಗಡಿದಾಟಿದೆ.
ಇಂದು ದರ ಪರಿಷ್ಕರಣೆಯ ನಂತರ ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ 101.25 ರೂ. ಇದೆ. ಭೋಪಾಲ್ ಮತ್ತು ಜೈಪುರದಲ್ಲಿಯೂ ಪೆಟ್ರೋಲ್ ದರ ಶತಕ ಬಾರಿಸಿದೆ. ನವದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ 95.03 ರೂಪಾಯಿ ಆಗಿದ್ದು, ಬೆಂಗಳೂರಲ್ಲಿ ಪೆಟ್ರೋಲ್ ಒಂದು ಲೀಟರ್ ಗೆ 28 ಪೈಸೆ ಏರಿಕೆಯಾಗಿ 97.92 ರೂ. ತಲುಪಿದೆ.