ನವದೆಹಲಿ: ತೈಲ ಕಂಪನಿಗಳಿಗೆ ಭಾರಿ ಲಾಭ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಶೀಘ್ರವೇ 5 ರಿಂದ 10 ರೂಪಾಯಿ ಇಳಿಕೆಯಾಗುವ ಸಾಧ್ಯತೆ ಇದೆ.
ತೈಲ ಮಾರಾಟ ಕಂಪನಿಗಳು ಮೂರನೇ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ ನಂತರ ಪೆಟ್ರೋಲ್, ಡೀಸೆಲ್ ತರ ಲೀಟರ್ ಗೆ 5ರಿಂದ 10 ರೂಪಾಯಿ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಂಪನಿಗಳಿಗೆ ನಿವ್ವಳ 75,000 ಕೋಟಿ ರೂ. ಲಾಭದ ಸಾಧ್ಯತೆ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಬಹುದು. ದರ ಇಳಿಕೆ ಹಣದುಬ್ಬರ ನಿವಾರಣೆ ಮತ್ತು ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ.
ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ಗಣನೀಯವಾಗಿ ನಿವ್ವಳ ಲಾಭಗಳಿಸಿದ್ದ ಪ್ರಮುಖ ತೈಲ ಕಂಪನಿಗಳು ಮೂರನೇ ತ್ರೈಮಾಸಿಕದಲ್ಲಿಯೂ ಲಾಭದಲ್ಲಿ ಮುಂದುವರೆಯುವ ಸಾಧ್ಯತೆ ಇದೆ.