ನವದೆಹಲಿ: ಕಳೆದ 15 ದಿನಗಳ ಅವಧಿಯಲ್ಲಿ ಕಚ್ಚಾ ತೈಲದ ದರ ಭಾರೀ ಇಳಿಕೆಯಾಗಿದೆ. ಬ್ಯಾರಲ್ ಗೆ 71 ಡಾಲರ್ ನಿಂದ 64 ಡಾಲರ್ ಗೆ ಕಡಿಮೆಯಾಗಿದೆ.
ಕಚ್ಚಾತೈಲದ ಬೆಲೆ ಇಳಿಕೆಯಾಗುತ್ತಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಕಡಿಮೆ ಮಾಡಲು ಅವಕಾಶ ಸೃಷ್ಟಿಯಾಗಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರಿದ್ದು, ಕಚ್ಚಾತೈಲದ ಬೆಲೆ ಏರಿಕೆ ನೆಪ ಹೇಳುತ್ತಿದ್ದ ಕಂಪನಿಗಳು ಈಗ ಬೆಲೆ ಕಡಿಮೆ ಮಾಡಲಿವೆ ಎಂದು ಹೇಳಲಾಗಿದೆ.
ಬ್ರೆಂಟ್ ಕಚ್ಚಾ ತೈಲ ದರ ಶೇಕಡ 10 ರಷ್ಟು ಇಳಿಕೆಯಾಗಿದ್ದು 1 ಬ್ಯಾರೆಲ್ ಗೆ 71 ಡಾಳರ್ ನಿಂದ 64 ಡಾಲರ್ ಗೆ ಇಳಿಕೆಯಾಗಿದೆ. ಭಾರತದಲ್ಲಿ ಕಳೆದ 24 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿಯಲ್ಲಿದೆ. ಇದಕ್ಕೆ 5 ರಾಜ್ಯಗಳ ವಿಧಾನಸಭೆ ಚುನಾವಣೆ ಕಾರಣವೆನ್ನಲಾಗಿದೆ.
ಸದ್ಯ ಅನೇಕ ಕಡೆ ಕೋವಿಡ್ ಎರಡನೇ ಅಲೆ ಆತಂಕ ಮೂಡಿಸಿದ್ದು, ಯುರೋಪ್ ಸೇರಿದಂತೆ ಅನೇಕ ಕಡೆಗಳಲ್ಲಿ ಲಾಕ್ಡೌನ್ ಜಾರಿ ಸೇರಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಕಾರಣದಿಂದ ತೈಲಕ್ಕೆ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಬೆಲೆ ಇಳಿಮುಖವಾಗಿದೆ.