ನವದೆಹಲಿ: ದೇಶದ ಮಹಾನಗರಗಳಲ್ಲಿ ಡೀಸೆಲ್ ದರದಲ್ಲಿ ಇಳಿಕೆಯಾಗಿದೆ. ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಡೀಸೆಲ್ ದರ ಪರಿಷ್ಕರಣೆಯಾಗಿದ್ದು, ದರ ಇಳಿಕೆಯಾಗಿದೆ. ದೇಶದ ರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ಲೀಟರ್ ಗೆ 30 ಪೈಸೆ ಇಳಿಕೆಯಾಗಿದ್ದು 70.80 ರೂ. ದರ ಇದೆ. ಪೆಟ್ರೋಲ್ ಲೀಟರ್ ಗೆ 81.06 ರೂಪಾಯಿ ಇದೆ.
ಅದೇ ರೀತಿ ಬೆಂಗಳೂರಿನಲ್ಲಿ ಡೀಸೆಲ್ ದರ 41 ಪೈಸೆಯಷ್ಟು ಕಡಿಮೆಯಾಗಿದ್ದು 74.89 ರೂಪಾಯಿ ಇದೆ. ಪೆಟ್ರೋಲ್ 83.69 ರೂ. ದರ ಇದೆ.
ಮುಂಬೈನಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 21 ಪೈಸೆಯಷ್ಟು ಇಳಿಕೆಯಾಗಿದ್ದು 77.12 ರೂ. ಇದೆ. ಪೆಟ್ರೋಲ್ ಲೀಟರ್ ಗೆ 87.74 ರೂ. ಇದೆ.
ಚೆನ್ನೈನಲ್ಲಿ ಡೀಸೆಲ್ ದರ ಲೀಟರ್ ಗೆ 36 ಪೈಸೆಯಷ್ಟು ಕಡಿಮೆಯಾಗಿದ್ದು ಲೀಟರ್ ಗೆ 76.19 ರೂ. ದರ ಇದೆ. ಪೆಟ್ರೋಲ್ ದರ ಲೀಟರ್ ಗೆ 84.14 ರೂ. ದರ ಇದೆ.