ನವದೆಹಲಿ: ಜುಲೈನಲ್ಲಿ ಮೂರನೇ ಬಾರಿಗೆ ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇವತ್ತು ಒಂದು ಲೀಟರ್ ಪೆಟ್ರೋಲ್ ದರ 35 ಪೈಸೆಯಷ್ಟು ಹೆಚ್ಚಾಗಿದೆ. ಆದರೆ, ಇಂದು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಜೂನ್ ತಿಂಗಳಲ್ಲಿ 16 ಸಲ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಲಾಗಿತ್ತು. ಜುಲೈ 5 ರವರೆಗೆ ಮೂರು ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.
ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ದರ 111 ರೂಪಾಯಿ ದಾಟಿದೆ. ಡೀಸೆಲ್ ದರ 102 ರೂಪಾಯಿಗಿಂತಲೂ ಹೆಚ್ಚಾಗಿದೆ. ದೇಶದ ಸುಮಾರು 332 ಜಿಲ್ಲೆಗಳಲ್ಲಿ 100 ರೂಪಾಯಿಗಿಂತ ಅಧಿಕ ದರದಲ್ಲಿ ಪೆಟ್ರೋಲ್ ಮಾರಾಟವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಒಂದು ಲೀಟರ್ ಪೆಟ್ರೋಲ್ 19.43 ರೂ.ನಷ್ಟು ಹೆಚ್ಚಾಗಿದೆ.
ದರ ಏರಿಕೆ ನಂತರ ಒಂದು ಲೀಟರ್ ಪೆಟ್ರೋಲ್ ದೆಹಲಿಯಲ್ಲಿ 99.86 ರೂ., ಮುಂಬೈನಲ್ಲಿ 105.92 ರೂ., ಕೊಲ್ಕೊತ್ತಾ 99.84 ರೂ., ಚೆನ್ನೈನಲ್ಲಿ 100.75 ರೂ. ಇದೆ.