ನವದೆಹಲಿ: ಇಂಧನ ದರ ಪರಿಷ್ಕರಣೆಯ ನಂತರ ಚೆನ್ನೈನಲ್ಲಿ ಪೆಟ್ರೋಲ್ 1 ಲೀಟರ್ ದರ 100 ರೂಪಾಯಿಗಿಂತ ಹೆಚ್ಚಾಗಿದೆ. ಜೈಪುರದಲ್ಲಿ 105 ರೂಪಾಯಿಗಿಂತಲೂ ಜಾಸ್ತಿಯಾಗಿದೆ.
ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಕೇರಳ ಮತ್ತು ತಮಿಳುನಾಡು ಸೇರಿ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂಧನ ದರ 100 ರೂಪಾಯಿಗಿಂತ ಹೆಚ್ಚಾಗಿದೆ.
ಈ ತಿಂಗಳಲ್ಲಿ 15 ನೇ ಬಾರಿಗೆ ದರ ಹೆಚ್ಚಳ ಮಾಡಿದ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ರೇಟ್ 35 ಪೈಸೆ, ಡೀಸೆಲ್ ದರ 25 ಹೆಚ್ಚಾಗಿದೆ.
ಮುಂಬೈಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ. 104.46 ರೂ. ಡೀಸೆಲ್ ಲೀಟರ್ಗೆ 96.42 ರೂ.ಗೆ ತಲುಪಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ – ಪ್ರತಿ ಲೀಟರ್ಗೆ. 98.46 ರೂ., ಡೀಸೆಲ್ ಬೆಲೆ – ಪ್ರತಿ ಲೀಟರ್ಗೆ. 88.90 ರೂ. ಇದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ – ಪ್ರತಿ ಲೀಟರ್ಗೆ 101.75 ರೂ., ಡೀಸೆಲ್ ಬೆಲೆ – ಪ್ರತಿ ಲೀಟರ್ಗೆ 94.25 ರೂ. ಇದೆ.