ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 35 ಪೈಸೆ ಹೆಚ್ಚಳವಾಗಿದ್ದು 86.05 ರೂ. ತಲುಪಿದೆ. ಅದೇ ರೀತಿ ಡೀಸೆಲ್ ಕೂಡ 35 ಪೈಸೆ ಹೆಚ್ಚಳವಾಗಿದ್ದು 76.23 ರೂಪಾಯಿಗೆ ತಲುಪಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.
ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ, ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ 35 ಪೈಸೆ ಹೆಚ್ಚಳವಾಗಿದೆ. ಮುಂಬೈ, ಚೆನ್ನೈ, ಕೊಲ್ಕೊತ್ತಾ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಗರಿಷ್ಠ ಮಟ್ಟ ತಲುಪಿದ್ದು, ಮುಂಬೈನಲ್ಲಿ ಡೀಸೆಲ್ ದರ ದಾಖಲೆಯ ಗರಿಷ್ಠ ಮಟ್ಟದಲ್ಲಿ ಇದೆ ಎಂದು ಹೇಳಲಾಗಿದೆ.
ಜಾಗತಿಕ ಮಾರುಕಟ್ಟೆ ಬೆಳವಣಿಗೆ ಆಧರಿಸಿ ದೇಶಿಯ ಮಾರುಕಟ್ಟೆಯಲ್ಲಿ ಇಂಧನ ದರ ಪರಿಷ್ಕರಣೆ ಮಾಡಲಿದ್ದು, ನಿರಂತರ ದರ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ.
ದೆಹಲಿ ಪೆಟ್ರೋಲ್ 86.05 ರೂ., ಡೀಸೆಲ್ 76.23 ರೂ.
ಮುಂಬೈ ಪೆಟ್ರೋಲ್ 92.62 ರೂ., ಡೀಸೆಲ್ 83.03 ರೂ.
ಚೆನ್ನೈ ಪೆಟ್ರೋಲ್ 88.60 ರೂ., ಡೀಸೆಲ್ 81.47 ರೂ.
ಕೋಲ್ಕತಾ ಪೆಟ್ರೋಲ್ 87.45 ಡೀಸೆಲ್ 79.83