ನವದೆಹಲಿ: ದೇಶಾದ್ಯಂತ ಸತತ ಐದನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ತೈಲ ಬೆಲೆಗಳ ನಿರಂತರ ಏರಿಕೆಯ ಪರಿಣಾಮ ದರ ಪರಿಷ್ಕರಣೆ ನಂತರ ದೇಶದಾದ್ಯಂತ ಇಂಧನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ.
ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಲೀಟರ್‌ಗೆ 35 ಪೈಸೆಯಷ್ಟು ಹೆಚ್ಚಳವಾಗಿದ್ದು, ಪೆಟ್ರೋಲ್ 107.59 ರೂ.ಗೆ ಏರಿದೆ. ಡೀಸೆಲ್ ಬೆಲೆ ಲೀಟರ್‌ಗೆ 96.32 ರೂ.ಗೆ ಏರಿಕೆಯಾಗಿದೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 113.46 ರೂ. ಮತ್ತು ಡೀಸೆಲ್ ಬೆಲೆ 104.38 ರೂ. ಆಗಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 111.34 ರೂ. ಮತ್ತು ಡೀಸೆಲ್ ಬೆಲೆ 102.23 ರೂ.ಆಗಿದೆ.
ರಾಜಸ್ಥಾನದ ಗಡಿಭಾಗದ ಗಂಗಾನಗರದಲ್ಲಿ ಇಂಧನ ಅತ್ಯಂತ ದುಬಾರಿಯಾಗಿದ್ದು, ಪೆಟ್ರೋಲ್ ಬೆಲೆ ಲೀಟರ್‌ಗೆ 119.79 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 110.63 ರೂ.ಗೆ ಏರಿದೆ.
ಸ್ಥಳೀಯ ತೆರಿಗೆಗಳ ಮೊತ್ತವನ್ನು ಆಧರಿಸಿ ಇಂಧನ ಬೆಲೆಗಳು ರಾಜ್ಯದಿಂದ ಬದಲಾಗುತ್ತವೆ. ಮೇ 5, 2020 ರಂದು ಅಬಕಾರಿ ತೆರಿಗೆಯನ್ನು ದಾಖಲೆ ಮಟ್ಟಕ್ಕೆ ಏರಿಸಲು ಸರ್ಕಾರ ನಿರ್ಧರಿಸಿದ ನಂತರ ಪೆಟ್ರೋಲ್ ಬೆಲೆಯಲ್ಲಿ ಒಟ್ಟಾರೆ ಪ್ರತಿ ಲೀಟರ್‌ಗೆ 35.98 ರೂ., ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 26.58 ರೂ. ಹೆಚ್ಚಳವಾಗಿದೆ.
ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 19 ಡಾಲರ್‌ಗಳಷ್ಟು ಕುಸಿದ ಪರಿಣಾಮವಾಗಿ ಗ್ರಾಹಕರಿಗೆ ಸಿಗಬಹುದಾದ ಲಾಭವನ್ನು ಪಡೆಯಲು ಸರ್ಕಾರ ಗ್ಯಾಸೋಲಿನ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿತು. ಅಂತರಾಷ್ಟ್ರೀಯ ಬೆಲೆಗಳು 85 ಡಾಲರ್ ಗೆ ಏರಿಕೆಯಾಗಿ, ಇಂಧನ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವು ಪ್ರತಿ ಲೀಟರ್‌ಗೆ ಕ್ರಮವಾಗಿ 32.9 ರೂ. ಮತ್ತು 31.8 ರೂ. ನಷ್ಟು ಇದೆ.