
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಪ್ರತಿ ಲೀಟರ್ ಗೆ 35 ಪೈಸೆ ಏರಿಸಲಾಗಿದ್ದು, ದೇಶದಲ್ಲಿ ಗರಿಷ್ಠ ಮಟ್ಟಕ್ಕೆ ಇಂಧನ ದರ ತಲುಪಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಲೀಟರ್‌ಗೆ 105.49 ರೂ. ಮತ್ತು ಮುಂಬೈನಲ್ಲಿ ಪ್ರತಿ ಲೀಟರ್‌ಗೆ 111.43 ರೂ. ಡೀಸೆಲ್ ಈಗ ಮುಂಬೈನಲ್ಲಿ ಪ್ರತಿ ಲೀಟರ್‌ಗೆ 102.15 ರೂ. ಮತ್ತು ದೆಹಲಿಯಲ್ಲಿ ಪ್ರತಿ ಲೀಟರ್‌ಗೆ 94.22 ರೂ.ಆಗಿದೆ.
ಸತತ ಮೂರನೇ ದಿನ ಇಂಧನ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 35 ಪೈಸೆ ಏರಿಕೆಯಾಗಿದೆ. ಅಕ್ಟೋಬರ್ 12 ಮತ್ತು 13 ರಂದು ದರಗಳಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.
ಕೋಲ್ಕತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 106.10 ರೂ. ಮತ್ತು 97.33 ರೂ. ಮತ್ತು ಚೆನ್ನೈನಲ್ಲಿ 102.70 ರೂ. ಮತ್ತು 98.59 ರೂ.ಆಗಿದೆ.
ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 109.16 ರೂ., ಡೀಸೆಲ್ ದರ 100 ರೂ., ಹೈದರಾಬಾದ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 109.73 ರೂ., ಡೀಸೆಲ್ ಲೀಟರ್ ಬೆಲೆ 102.80 ರೂ.
ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮೂರು ವಾರಗಳ ದರ ಪರಿಷ್ಕರಣೆ ಅವಧಿ ಮುಗಿದ ನಂತರ ಇದು ಪೆಟ್ರೋಲ್ ಬೆಲೆಯಲ್ಲಿ 15 ನೇ ಹೆಚ್ಚಳ ಮತ್ತು ಡೀಸೆಲ್ ಬೆಲೆಯಲ್ಲಿ 18 ನೇ ಹೆಚ್ಚಳವಾಗಿದೆ.